

ವಿಜಯಪುರ:ಸ್ಥಳಿಯ ಆರ್ಕೆಎಂ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವತಿಯಿಂದ ಇಲ್ಲಿನ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯುರ್ವೇದ ಎಕ್ಸ್ಪೋ ಹಮ್ಮಿಕೊಳ್ಳಲಾಗಿತ್ತು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಎಕ್ಸಪೋ ಉದ್ಘಾಟಿಸಿದರು. ಆರ್ಕೆಎಂ ಫಾರ್ಮಸಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಔಷಧೀಯ ಶ್ಯಾಂಪು, ಸಾಬೂನು ಮತ್ತು ಪುಡಿಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಪ್ರದರ್ಶನದಲ್ಲಿರಿಸಲಾಗಿತ್ತು. ಅಲ್ಲದೆ, ದೈನಂದಿನ ಆಹಾರ ಪದಾರ್ಥಗಳು ಆರೋಗ್ಯ ಕಾಪಾಡಲು ಹೇಗೆ ಸಹಾಯ ಮಾಡುತ್ತವೆ ಎಂಬ ವಿಷಯಗಳ ಕುರಿತು ವಿದ್ಯಾರ್ಥಿಗಳು ಆಕರ್ಷಕವಾದ ಪೋಸ್ಟರ್ಗಳ ಮಾಹಿತಿ ಒದಗಿಸಿದರು.
ಎಕ್ಸಪೋಗೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಆಯುರ್ವೇದದ ಾನವನ್ನು ನವೀನ ಉತ್ಪನ್ನಗಳ ಮೂಲಕ ಹಾಗೂ ಶಿಣಾತ್ಮಕ ಪ್ರದರ್ಶನಗಳ ಮೂಲಕ ಹರಡುವ ವಿದ್ಯಾಲಯದ ಪ್ರಯತ್ನಕ್ಕೆ ಶ್ಲಾಸಿದರು.ಕಾಲೇಜಿನ ನಿರ್ವಹಣಾ ಮಂಡಳಿ ಮತ್ತು ಅಧ್ಯಾಪಕರು, ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಶ್ಲಾಸಿ, ಸಮಾಜದ ಹಿತಕ್ಕಾಗಿ ಆಯುರ್ವೇದವನ್ನು ಉತ್ತೇಜಿಸುವುದು ನಮ್ಮ ಧ್ಯೇಯವಾಗಿದೆ ಎಂದು ತಿಳಿಸಿದರು.
ಡಾ. ಮೃನಾಲ ರುದ್ರಗೌಡರ, ಡಾ. ರಾಜಶ್ರೀ ವಾಟರಕರ, ಡಾ. ಪುಷ್ಪಾ ರುದ್ರಗೌಡರ ಮತ್ತಿತರರಿದ್ದರು.
ವಿಜಯಪುರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಆರ್ಕೆಎಂ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಆಯುರ್ವೇದ ಎಕ್ಸ್ಪೋ ಶಂಭುಲಿಂಗಯ್ಯ ಕರ್ಪೂರಮಠ ಉದ್ಘಾಟಿಸಿದರು. ಡಾ. ಮೃನಾಲ ರುದ್ರಗೌಡರ, ಡಾ. ರಾಜಶ್ರೀ ವಾಟರಕರ ಮತ್ತಿತರರಿದ್ದಾರೆ.