ನದಿ ತೀರದ ಜನರು ಎಚ್ಚರಿಕೆಯಿಂದ ಇರಿ

HLR cc patil
Published on

ಹೊಳೆಆಲೂರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇನ್ನೂ ಎರಡ್ಮೂರು ದಿನ ಬೆಳಗಾವಿ ಜಿಲ್ಲೆಯ ಮಲಪ್ರಭಾ ನದಿಯ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಅಲ್ಲದೆ, ಅಖಂಡ ಧಾರವಾಡ ಜಿಲ್ಲೆಯ ಬೆಣ್ಣೆಹಳ್ಳ ಸಹ ತುಂಬಿ ಹರಿಯುವ ಸಾಧ್ಯತೆ ಇದ್ದು, ಸುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಹೊಳೆಆಲೂರ ಹೋಬಳಿ ವ್ಯಾಪ್ತಿಯ ಮಲಪ್ರಭಾ ನದಿಗೆ ಬುಧವಾರ ಅಧಿಕಾರಿಗಳೂಂದಿಗೆ ತೆರಳಿ ನೀರಿನ ಮಟ್ಟ ವೀಕ್ಷಿಸಿದರು. ಬಳಿಕ ಮೆಣಸಗಿ ಗ್ರಾಪಂನಲ್ಲಿ ಏರ್ಪಡಿಸಿದ್ದ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು. ಹೊಳೆಆಲೂರ, ಹೊಳೆಮಣ್ಣೂರ, ಮೆಣಸಗಿ, ಗಾಡಗೋಳಿ, ಹೊಳೆಹಡಗಲಿ, ಅಮರಗೋಳ, ಕುರುವಿನಕೊಪ್ಪ, ಬಿ.ಎಸ್.ಬೇಲೇರಿ, ಬಸರಕೊಂಡ, ಶಿರೋಳ ಗ್ರಾಮಸ್ಥರು ಮುಂಜಾಗ್ರತೆಯಿಂದ ಇರಬೇಕು ಎಂದರು.

26 ಕೋಟಿ ರೂ. ವೆಚ್ಚದಲ್ಲಿ ಹೊಳೆಆಲೂರ ಬಳಿ ಮಲಪ್ರಭಾ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ವೀಕ್ಷಿಸಿದರು.

ತಹಸೀಲ್ದಾರ್ ಕೆ. ನಾಗರಾಜ, ತಾಪಂ ಇಒ ವಿಜಯಲಕ್ಷ್ಮೀ ಹಕಾರಿ, ಗ್ರಾಪಂ ಅಧ್ಯಕ್ಷೆ ಚಂದವ್ವ ಪೂಜಾರ, ಶ್ರೀಜ್ಯೋತಿ ಗಾಣಿಗೇರ, ಬಸವಂತಪ್ಪ ತಳವಾರ, ಮುತ್ತಣ್ಣ ಜಂಗಣ್ಣವರ, ಜಿ.ಡಿ. ಪಾಟೀಲ, ಕೆ.ಸಿ. ಪಾಟೀಲ, ಜಿ.ಕೆ. ಕಲ್ಲಾಪೂರ, ಬಸವರಾಜ ಬೀರನೂರ, ಶಿವಕಮಾರ ನೀಲಗುಂದ, ಅಶೋಕ ಹೆಬ್ಬಳ್ಳಿ, ರಾಮನಗೌಡ ಪಾಟೀಲ, ಶಶಿಧರಗೌಡ ಪಾಟೀಲ, ವೀರಸಂಗಯ್ಯ ಮೊಕಾಶಿಮಠ, ಸುಮಂಗಲಾ ಕಲ್ಲಾಪೂರ, ಶಾರದಾ ದಳವಾಯಿ, ಬಸವರಾಜ ಗಿರಿತಮ್ಮನ್ನವರ, ಶಿವನಗೌಡ ಮೆಣಸಗಿ, ಎಂ.ಎಸ್. ಜಂಗಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net