ದೈವ ಕೃಪೆಯಿಂದ ತುಂಬಿದ ನದಿಗಳು

15 mbl bhagina arpane
Published on

ಮುಳಬಾಗಿಲು: ತಾಲೂಕಿನಲ್ಲಿ ಕೃಷಿಗೆ ಮತ್ತು ಕುಡಿಯುವ ನೀರಿಗೆ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಾಗಿತ್ತು. ಕಳೆದ ವಾರ ದೊಡ್ಡಗುರ್ಕಿ ಗ್ರಾಮದ ಶ್ರೀ ವೆಂಕಟರಮಣ ಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಸಮೃದ್ಧಿ ಮಳೆಯಾಗಲಿ ಎಂದು ಪ್ರಾರ್ಥಿಸಲಾಗಿತ್ತು. ಈಗ ಎರಡೇ ದಿನದಲ್ಲಿ ದೇವರ ಕೃಪೆಯಿಂದ ತಾಲೂಕಿನ ಬಹುತೇಕ ಕೆರೆ, ಕುಂಟೆ, ನದಿ ನಾಲೆಗಳು ತುಂಬಿ ತುಳುಕುತ್ತಿವೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು.

ತಾಲೂಕಿನ ದುಗ್ಗಸಂದ್ರ ಹೋಬಳಿ ಸಂಗಸಂದ್ರ ಗ್ರಾಮದ ದೊಡ್ಡಕೆರೆ ಕೋಡಿ ಬಿದ್ದ ಪರಿಣಾಮ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಸಂಸತಿ ಪರಂಪರೆಯಲ್ಲಿ ಪ್ರಕೃತಿ ಪೂಜೆ, ಗಂಗಾಪೂಜೆ, ಗೋವು ಪೂಜೆ ಸಂಪ್ರದಾಯ ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರಲಾಗುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಕೆರೆಗಳು ತುಂಬಿದಾಗ ಊರಿನ ಜನರೆಲ್ಲ ಸೇರಿ ಗಂಗಾ ದೇವಿಗೆ ತಂಬಿಟ್ಟು ಮಾಡಿ, ದೀಪ ಬೆಳಗಿ ಬಾಗಿನ ಅರ್ಪಿಸುತ್ತಾರೆ. ಪ್ರಕೃತಿ ಮತ್ತು ಜಲಮೂಲಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net