ವರದಾ ನದಿ ನೀರಿನಲ್ಲಿ ಮುಳಗಿ ವ್ಯಕ್ತಿ ಸಾವು

Crime Logo
Published on

ಹಾನಗಲ್ಲ: ಬಹಿರ್ದೆಸೆಗೆ ಹೋದ ವ್ಯಕ್ತಿ ನೀರು ಮುಟ್ಟುವ ಸಲುವಾಗಿ ವರದಾ ನದಿಗೆ ಹೋದಾಗ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಹೊಂಕಣ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ತಾಲೂಕಿನ ತಿಳವಳ್ಳಿ ಗ್ರಾಮದ ಲಕ್ಷ್ಮಣ ಮಹದೇವಪ್ಪ ಪವಾರ (40) ಮೃತ ವ್ಯಕ್ತಿ.
ಈತ ತಿಳವಳ್ಳಿಯಿಂದ ಹೊಂಕಣಕ್ಕೆ ಬಂದಾಗ ಬಹಿರ್ದೆಸೆಗೆ ಹೋಗಿದ್ದಾನೆ. ನಂತರ ನೀರು ಮುಟ್ಟುವ ಸಲುವಾಗಿ ನದಿಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net