ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ; ಕಡಬ – ಪಂಜ ರಸ್ತೆಯಲ್ಲಿ ವಾಹನ ಸಂಚಾರ ಬಂದ್

IMG-20220718-WA0016
Published on

ಕಡಬ: ಘಟ್ಟ ಪ್ರದೇಶ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿಹರಿಯುತ್ತಿದೆ. ಭಾರೀ ಮಳೆಗೆ ಕಡಬ – ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯ ನೀರು ರಸ್ತೆಗೆ ನುಗ್ಗಿದ್ದು, ಸೋಮವಾರ ವಾಹನ ಸಂಚಾರ ಸ್ಥಗಿತಗೊಂಡಿದೆ .ಕೆಲವು ವಾಹನಗಳು ನೆರೆ ನೀರಿನಲ್ಲಿ ಸಂಚರಿಸುತ್ತಿದೆಯಾದರೂ, ಹಲವರು ಪುಳಿಕುಕ್ಕು, ಎಡಮಂಗಲ, ನಿಂತಿಕಲ್ಲು ರಸ್ತೆಯನ್ನು ಬಳಸಿ ಮೂಲಕ ಪಂಜಕ್ಕೆ ತೆರಳುತ್ತಿದ್ದಾರೆ. ಇನ್ನು ಕುಮಾರಧಾರ ನದಿ ತಪ್ಪಲಿನ ತಗ್ಗು  ಕೃಷಿ ಪ್ರದೇಶಗಳು ಜಲಾವೃತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net