ರಿತುಪರ್ಣಗೆ ನಂದಗೋಕುಲ ಯುವ ಪುರಸ್ಕಾರ

mng-27oct-rituparna
Published on


ಮಂಗಳೂರು : ಅರೆಹೊಳೆ ಪ್ರತಿಷ್ಠಾನವು ಪ್ರತಿ ವರ್ಷ ಯುವ ಪ್ರತಿಭೆಗಳನ್ನು ಗುರುತಿಸಿ ನೀಡುವ ನಂದಗೋಕುಲ ಯುವ ಪುರಸ್ಕಾರಕ್ಕೆ 2025ನೇ ಸಾಲಿಗೆ ಅಮೆರಿಕದ ರೋಲ್ಸ್ ರಾಯ್ ಕಂಪನಿಯ ಜೆಟ್ ಇಂಜಿನ್ ಮ್ಯಾನುಫ್ಯಾಕ್ಚರಿ ಘಟಕಕ್ಕೆ ನೇರ ನೇಮಕಾತಿ ಪಡೆದ
ಪ್ರತಿಭಾನ್ವಿತ ಇಂಜಿನಿಯರ್ ರಿತುಪರ್ಣ ಕೆ.ಎಸ್. ಅವರು ಆಯ್ಕೆಯಾಗಿದ್ದಾರೆ. ಇವರು ಮೂಲತಃ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾಮದ ಕೊದೂರಿನ ಸುರೇಶ್- ಗೀತಾ ಸುರೇಶ್ ದಂಪತಿ ಪುತ್ರಿ . ಅ.31ರಂದು ನಡೆಯವ ನಂದಗೋಕುಲ ದೀಪಾವಳಿ ಸಂಭ್ರಮದ ವೇಳೆ ಪ್ರಶಸ್ತಿ ಪ್ರದಾನಿಸಲಾಗುತ್ತದೆ ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ತಿಳಿಸಿದ್ದಾರೆ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net