ಶ್ರೀ ಕನ್ನಂಬಾಡಿ ಅಮ್ಮನ ದೇಗುಲದಲ್ಲಿ ಧಾರ್ಮಿಕ ಕಾರ್ಯ

23ss1Homa karya
Published on

ಶನಿವಾರಸಂತೆ: ಸಮೀಪದ ಮಾಲಂಬಿ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ಜೀರ್ಣೋದ್ಧಾರಗೊಂಡ ನೂತನ ದೇವಾಲಯದ ಉದ್ಘಾಟನೆ ಹಿನ್ನೆಲೆಯಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆದವು.


ಗುರುವಾರ ಬೆಳಗ್ಗೆ 8 ಗಂಟೆಯಿಂದ ದೇವಾಲಯದಲ್ಲಿ ಕಳಸ ಸ್ಥಾಪನೆ ನೆರವೇರಿಸಲಾಯಿತು. 10 ಗಂಟೆಗೆ ಗಣಪತಿ ಹೋಮ, ಮಧ್ಯಾಹ್ನ 12 ಗಂಟೆಗೆ ದಿಕ್ಪಾಲಕ ಹೋಮ ಕಾರ್ಯಗಳು ನಡೆದವು. ಮಧ್ಯಾಹ್ನ 2ಗಂಟೆಗೆ ಸಹಸ್ರನಾಮ ಪಾರಾಯಣ ನಡೆಯಿತು. ಸಂಜೆ 6 ಗಂಟೆಯಿಂದ ರಾತ್ರಿವರೆಗೂ ದುರ್ಗಾ ಸಪ್ತಶತಿ, ಪಾರಾಯಣ, ಜಯಾದಿ ಹೋಮ, ನವಗ್ರಹ ಹೋಮ ನಂತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಮನೆಹಳ್ಳಿ ಮಠಾದೀಶ ಮಹಾಂತ ಶಿವಲಿಂಗ ಸ್ವಾಮೀಜಿ, ಶ್ರೀಕಂಠ ಶಾಸ್ತ್ರಿ, ಮಲ್ಲೇಶ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ದೇವಾಲಯಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಶುಭ ಹಾರೈಸಿದರು. ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಗ್ರಾಮದ ಮುಖಂಡ ಎಂ.ಇ.ವೆಂಕಟೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net