

ಚಿತ್ರದುರ್ಗ: ಕಾನೂನಿಗೆ ತಿದ್ದುಪಡಿ ತಂದು ರೈತರ ಸಾಲಕ್ಕಾಗಿ ಅವರ ಆಸ್ತಿಪಾಸ್ತಿಗಳ ಮುಟ್ಟುಗೋಲು ಮಾಡಿಕೊಳ್ಳುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿತ್ರದುರ್ಗ ತಾಲೂಕು ಸಿರಿಗೆರೆ ಶ್ರೀತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 30ನೇ ಶ್ರದ್ಧಾ ಂಜಲಿ ಸಮಾರಂಭದಲ್ಲಿ ಮಾತನಾಡಿ,ಸಾಲ ಪಡೆದ ರೈತರು ಅನುಭವಿಸುತ್ತಿರುವ ಕಿರುಕುಳ ಗಮನದಲ್ಲಿದೆ. ರೈತ ವಿರೋಧಿ ನೀತಿಗಳಿಗೆ ಕಾ ನೂನು ತಿದ್ದುಪಡಿ ತಂದು ಆ ಮೂಲಕ ರೈತರಿಗೆ ಸಾಲ ತೀರಿಸಲು ಅವಕಾಶ ಮಾಡಿಕೊಡಲಾಗುವುದು.
ಹಣಕಾಸು ಸಂಸ್ಥೆಗಳು ಸಾಲಕ್ಕೆ ಸಂಬಂಧಿಸಿದಂತೆ ರೈತರಿಗೆ ನೋಟಿಸ್ ನೀಡುವುದು,ಅವರ ಮನೆ,ಆಸ್ತಿ- ಪಾಸ್ತಿ ಮುಟ್ಟುಗೋಲು ಮಾಡಿಕೊಳ್ಳುವುದನ್ನು ಸಂಪೂರ್ಣ ನಿಷೇಧಿಸಲಾಗುವುದು. ಈ ಕುರಿತಂತೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು. ಭದ್ರಾ ಮೇಲ್ದ ಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆಯಾಗುವ ಅಂತಿಮ ಘಟ್ಟದಲ್ಲಿದೆ. ಕೇಂದ್ರದ ಅನುಮೋದನೆ ದೊರೆಯುತ್ತಿದ್ದಂತೆ ತಕ್ಷಣ
14 ಸಾವಿರ ಕೋ ಟಿ ರೂ.ನೆರವು ದೊರೆಯಲಿದೆ. ಇದರಿಂದ ಯೋಜನೆ ತ್ವರಿತ ಅನುಷ್ಠಾನಕ್ಕೆ ಹಣಕಾಸಿನ ದೊಡ್ಡ ಶಕ್ತಿ ಸಿಗು ತ್ತದೆ.
ರಾಜ್ಯದ 14 ಲಕ್ಷ ರೈತರ ಮಕ್ಕಳು ಮುಖ್ಯಮಂತ್ರಿವಿದ್ಯಾನಿಧಿ ಯೋಜನೆ ಫಲಾನುಭವಿಗಳಾಗಿದ್ದಾರೆ.ಕೃಷಿ ಕಾರ್ಮಿಕರು ನೇಕಾರರು, ಮೀನುಗಾರರು,ಟ್ಯಾಕ್ಸಿ.ಆಟೋ ಚಾಲಕರ ಮಕ್ಕಳು ಸೇರಿದಂತೆ ಎಲ್ಲ ಶ್ರಮಿಕ ವರ್ಗದ ಮಕ್ಕಳಿಗೂ ಈ ಯೋಜನೆ ವಿಸ್ತರಿಸಲಾಗುವುದು.
ಸಿರಿಗೆರೆ ಹಿರಿಯ ಶ್ರೀಗಳ ಈ ಕಾರ‌್ಯಕ್ರಮದಲ್ಲಿ ಪ್ರತಿ ವರ್ಷ ಭಾಗವಹಿಸುವುದರಿಂದ ಮನಸ್ಸಿನ ಭಾವನೆಗಳು ಶುದ್ಧವಾಗುತ್ತವೆ. ಲಿಂಗೈಕ್ಯ ಶ್ರೀಗಳು,ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು,ದುಃಖ,ದುಮ್ಮಾನ,ಸವಾಲುಗಳನ್ನು ಎದುರಿಸಿದ್ದರು. ಆದರೆ ಅವುಗಳನ್ನು ಅವರು ಲೆಕ್ಕಿ ಸದೆ ಸಮಾಜದ ಏಳಿಗೆಗೆ ಶ್ರಮಿಸಿ ಶ್ರೇಷ್ಠರಾಗಿದ್ದಾರೆ ಎಂದರು.
ಡಾಕ್ಟರ್ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ರೈತರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯಬಂದು 7 ದಶಕ ಕಳೆದರೂ ಮಧ್ಯಕರ್ನಾಟಕದ ಈ ಭಾಗಕ್ಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯಗಳು ದೊರೆತಿಲ್ಲ.ಡಾಕ್ಟರ್ ಶ್ರೀಗಳು ಇಚ್ಛಾ ಶಕ್ತಿಯಾಗಿದ್ದರೆ,ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕ್ರಿಯಾಶಕ್ತಿಯಾಗಿದ್ದಾರೆ. ಇವರಿಬ್ಬರಿಂದಾಗಿ ಈ ಭಾಗದ ಅನೇಕ ನೀ ರಾವರಿ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಕಳೆದ 25 ವರ್ಷಗಳಿಂದ ಕೆರೆಗಳನ್ನು ತುಂಬಿಸುವ ಕಾಯಕದಲ್ಲಿ ಡಾಕ್ಟರ್‌ಗುರುಗಳು ತೊಡಗಿದ್ದಾರೆ.
ಎಲ್ಲೆಲ್ಲಿ ತರಳಬಾಳು ಹುಣ್ಣಿಮೆ ಕಾರ‌್ಯಕ್ರಮಗಳಾಗುತ್ತವೆಯೋ ಅಲ್ಲೆಲ್ಲ ಏತ ನೀರಾವರಿ ಯೋಜನೆಗಳಾಗಿವೆ. ಪ್ರತಿಪಕ್ಷದಲ್ಲಿದ್ದಾಗ ನೀರಾ ವರಿ ಯೋಜನೆ ಸೇರಿದಂತೆ ನಾನಾ ಜನ ಪರ ಕೆಲಸಗಳಿಗೆ ಯಡಿಯೂರಪ್ಪ ರಾಜ್ಯದ ಉದ್ದಗಲಕ್ಕೆ ಪಾದಯಾತ್ರೆಗಳನ್ನು ಮಾಡಿದ್ದಾರೆ. ಅವ ರು ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಈಡೇರಿಸುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ,ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಕೆರೆ,ಕಟ್ಟೆ ಜಲಾಶಯಗಳು ತುಂಬಿವೆ. ಕೆಲವು ಭಾಗದಲ್ಲಿ ಅತಿವೃಷ್ಠಿಯಿಂದ ಬೆಳೆ ನಾಶವಾಗಿದೆ.ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ಸಿಎಂ ಬೊಮ್ಮಾಯಿ ಸದನದಲ್ಲಿ ಭರವಸೆ ನೀಡಿದ್ದಾರೆ.
ದೇಶಾದ್ಯಂತ ರೈತರ ಕಟ್ಟಿದ್ದ 26 ಸಾವಿರ ಕೋಟಿ ಬೆಳೆ ವಿಮಾ ಕಂತಿಗೆ, ಒಂದು ಲಕ್ಷ ಕೋಟಿ ರೂ.ಪರಿಹಾರ ದೊರಕಿದೆ. ರಾಜ್ಯಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದೆ. ಪೂಜ್ಯರ ಅಪೇಕ್ಷೆಯಂತೆ ನಾನು ಅಧಿಕಾರದಲ್ಲಿದ್ದಾಗ ಭರಮಸಾಗರ ಏತ ನೀರಾವರಿಗೆ 565 ಕೋಟಿ ರೂ.ಹಾಗೂ ಜಗಳೂರು ಏತ ನೀರಾವರಿಗೆ 725 ಕೋಟಿ ರೂ.ಬಿಡುಗಡೆ ಮಾಡಿದ್ದಾಗಿ ಹೇಳಿದರು. ರೈತರಿಗೆ ಸಾಲದ ಹೆಸರಲ್ಲಿ ಆಗುತ್ತಿರುವ ಕಿರುಕುಳವನ್ನು ಸರ್ಕಾರ ತಪ್ಪಿಸಲಿದೆ ಎಂದರು.
ಸಾನ್ನಿಧ್ಯ ವಹಿಸಿ,ಆಶೀರ್ವಚನ ನೀಡಿದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು,ಬೊಮ್ಮಾಯಿ ಮತ್ತು ಯಡಿಯೂ ರಪ್ಪ ಅವರು ಗರ್ಭಗುಡಿ,ಉತ್ಸವಮೂರ್ತಿಗಳಿದ್ದಂತೆ. ಅತಿವೃಷ್ಠಿಯಿಂದ ಬೆಳೆ ಹಾನಿ ಅನುಭವಿಸಿರುವ ರೈತರಿಗೆ ಪರಿಹಾರ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸಾಲಕ್ಕೆ ಅವರ ಆಸ್ತಿಪಾಸ್ತಿ ಜಫ್ತಾಗದು ಎಂದಿದ್ದಾರೆ. 2023ರಲ್ಲಿ ವಿಜಯನಗರ ಜಿಲ್ಲೆ ಕೊಟ್ಟೂರಲ್ಲಿ ತರಳಬಾಳು ಹುಣ್ಣಿಮೆ ಕಾರ‌್ಯಕ್ರಮ ಆಯೋಜಿಸಲಾಗುವುದು. ಅಂದಿನ ಕಾರ‌್ಯಕ್ರಮಕ್ಕೆ ಆಗಮಿಸುವಾಗ ಸಿಎಂ ಕೊಟ್ಟೂರು ಏತ ನೀರಾವರಿ ಯೋಜನೆಗೆ ಆದೇಶವನ್ನು ಹಿಡಿದು ಬರ ಬೇಕೆಂದರು.
ಆಕಾಶಕ್ಕೆ ಏಣಿ
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ,ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಒಂದೆಡೆ ನೆರೆ ಹಾ ವಳಿ,ಮತ್ತೊಂದೆಡೆ ಕೋವಿಡ್‌ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತ್ತು. ಆದರೂ ಅವರು ಎದೆಗುಂದದೆ ನೀರಾವರಿ ಯೋ ಜನೆಗಳಿಗೆ ಒಂದು ಲಕ್ಷ ಕೋಟಿ ರೂ.ಅನುದಾನ ಮೀಸಲಿಡಲು ತೀರ್ಮಾನಿಸಿದ್ದರು.
ನಾವು ಅಧಿಕಾರಕ್ಕೆ ಬಂದರೆ ಆಕಾಶಕ್ಕೆ ಏಣಿ ಹಾಕುವ ರೀತಿ ಕೆಲವರು ಮಾತನಾಡುತ್ತಾರೆ. ಅದೆಲ್ಲ ಅಷ್ಟು ಸುಲಭವಲ್ಲ. ಯಡಿಯೂರಪ್ಪ ಅವರ ಆಶಯದಂತೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬೊಮ್ಮಾಯಿ ಟೊಂಕ ಕಟ್ಟಿ ನಿಂತಿದ್ದಾರೆ ಎಂದರು.
ರಾಜ್ಯಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರ. ನಾಡಿನ ಉದ್ದಗಲಕ್ಕೂ ಅಕ್ಷರ,ಅನ್ನ ದಾಸೋಹದ ಮೂಲಕ ಶೈಕ್ಷಣಿಕ ಪ್ರಗತಿಗೆ ಅನೇಕ ಮಠಗಳು ಸಾಕಷ್ಟು ಕೆಲಸ ಮಾಡಿವೆ. ಸಿರಿಗೆರೆ ಶ್ರೀಗಳು ಹಿಂದಿನ ಗುರುಗಳ ಮಾರ್ಗದಲ್ಲಿ ಸಾಗಿದ್ದಾರೆ. ಗ್ರಾಮೀಣ ಜನರ ಬದುಕಿಗೆ ಶಕ್ತಿ ತುಂಬಿದ್ದಾರೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡದ್ದಾರೆ ಎಂದರು.
ಸಿರಿಗೆರೆ ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಗುರುವಂದನೆ ಸಲ್ಲಿಸಿದರು. ಈ ವೇಳೆ ಡಾಕ್ಟರ್ ಶ್ರೀಗಳು ಬರೆದ ಮೂರು ಪುಸ್ತಕಗಳನ್ನು ಸಿಎಂ,ಯ ಡಿಯೂರಪ್ಪ ಹಾಗೂ ಮಾಧುಸ್ವಾಮಿ ಬಿಡುಗಡೆ ಮಾಡಿದರು.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್,ಶಾಸಕರಾದ
ಎಂ.ಚಂದ್ರಪ್ಪ,ಎಂ.ಬಿ.ಪಾಟೀಲ್,ಜಿ.ಎಚ್.ತಿಪ್ಪಾರೆಡ್ಡಿ,ಎಸ್.ಎ.ರವೀಂದ್ರನಾಥ್,ಅರುಣ್‌ಕುಮಾರ್,ಬೆಳ್ಳಿಪ್ರಕಾಶ್,ಮಾಡಾಳ್‌ವಿರೂಪಾಕ್ಷಪ್ಪ,ಎಸ್.ವಿ.ರಾಮಚಂದ್ರಪ್ಪ,ಪ್ರೊ.ಲಿಂಗಣ್ಣ,ಎಂಎಲ್‌ಸಿ ಕೆ.ಎಸ್.ನವೀನ್, ಡಿಸಿ ಕವಿತಾ ಎಸ್ ಮನ್ನಿಕೇರಿ,ಜಿ.ಪಂ.ಸಿಇಒ ಡಾ.ಕೆ.ನಂದಿನಿದೇವಿ,ಎಸ್ಪಿ ಕೆ.ಪರಶುರಾಮ್ ಸೇರಿದಂತೆ ಮತ್ತಿತರರು ಇದ್ದರು.
---