ಜನಸಂಖ್ಯೆ ನಿಯಂತ್ರಿಸದಿದ್ದರೆ ಅಪಾಯ

POPULATION
Published on

ಮುಂಡರಗಿ: ಜನಸಂಖ್ಯೆ ನಿಯಂತ್ರಿಸದಿದ್ದರೆ ಹೆಚ್ಚಿನ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಎಚ್ಚೆತ್ತುಕೊಂಡು ಜನಸಂಖ್ಯೆ ನಿಯಂತ್ರಿಸುವ ಕಾರ್ಯ ಮಾಡಬೇಕು ಎಂದು ಪ್ರಾಚಾರ್ಯ ಸಿ.ಎಸ್.ಅರಸನಾಳ ಹೇಳಿದರು.

ಪಟ್ಟಣದ ಶ್ರೀಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯ ಮತ್ತು ಎನ್‌ಎಸ್‌ಎಸ್ ಘಟಕದ ಸಂಯುಕ್ತ ಅಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಸಂಖ್ಯಾ ಸ್ಫೋಟದಿಂದ ಲಿಂಗ ಅಸಮಾನತೆ, ಶಿಶು ಮರಣ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಸಮಸ್ಯೆ ಮೊದಲಾದ ಸಮಸ್ಯೆಗಳು ಎದುರಾಗಲಿವೆ. ಬಡತನ, ಆರ್ಥಿಕತೆ ಮತ್ತು ಮಹಿಳೆಯ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಜನರ ಜೀವನ ಸುಧಾರಣೆ ಮತ್ತು ಉತ್ತಮ ಭವಿಷ್ಯ ಕುರಿತು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ನಡೆಸಲು ವಿಶ್ವಸಂಸ್ಥೆ ಕರೆ ನೀಡಿದೆ ಎಂದರು.

ಪ್ರೊ.ರಾಜಶೇಖರ ಹುಲ್ಯಾಳ, ಪ್ರಶಿಕ್ಷಣಾರ್ಥಿಗಳಾದ ಹರೀಶ ಆರೇರ, ದೀಕ್ಷಿತ ಕುಮಾರ, ಮಹಾಂತೇಶ ತಟ್ಟಿಮಠ, ನಾಗರಾಜ ಸುಗ್ನಳ್ಳಿ ಮಾತನಾಡಿದರು. ಉಪನ್ಯಾಸಕಿ ಶಶಿಕಲಾ ಹಂಚಿನಾಳ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎ.ಕೆ. ಮತ್ತೂರಮಠ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಕಾಂತ ಉಪಸ್ಥಿತರಿದ್ದರು. ಕೋಟೆಪ್ಪ ಸ್ವಾಗತಿಸಿದರು. ಅನ್ನಪೂರ್ಣ ನಿರೂಪಿಸಿದರು. ವೆಂಕಟೇಶ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net