ಹೆಚ್ಚುತ್ತಿರುವ ಬಿಸಿಲಿನ ತಾಪ, ಬಸವಳಿದ ಅಧಿಕಾರಿ ವರ್ಗ, ಕಚೇರಿಯ ವೇಳಾಪಟ್ಟಿ ಬದಲಿಸಲು ಜಿಲ್ಲಾಡಳಿತಕ್ಕೆ ಮನವಿ

NOUKARARA MANAVI TO ADC
ವಿಜಯಪುರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸುರೇಶ ಶೇಡಶಾಳ, ಸಯ್ಯದ್‌ಜುಬೇರ್ ಎಸ್. ಕೆರೂರ, ಶಿವರಾಜ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಬೇಸಿಗೆ ಹಿನ್ನೆಲೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೌಕರರು ಬಸವಳಿಯುತ್ತಿದ್ದಾರೆ. ಹೀಗಾಗಿ ಸರ್ಕಾರಿ ಕಚೇರಿಗಳ ವೇಳಾ ಪಟ್ಟಿ ಬದಲಿಸಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶಾಳ ಮಾತನಾಡಿ, ವಿಜಯಪುರ ಬಿಸಿಲೂರು ಎಂಬ ಖ್ಯಾತಿ ಪಡೆದಿದೆ. ಪ್ರತಿ ವರ್ಷ ಬೇಸಿಗೆ ಸಂದರ್ಭ ಬಿಸಿಲಿನ ತೀವ್ರತೆ ಹೆಚ್ಚಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ನೌಕರರು ತೊಂದರೆ ಅನುಭವಿಸುತ್ತಾರೆ. ಹೀಗಾಗಿ ಏಪ್ರಿಲ್ 1 ರಿಂದ ಮೇ 31 ರವರೆಗೆ ಸರ್ಕಾರಿ ಕಚೇರಿಗಳ ಸಮಯವನ್ನು ಬದಲಾವಣೆ ಮಾಡಬೇಕೆಂದು ಮನವಿ ಮಾಡಿದರು.

ಕೋಶಾಧ್ಯಕ್ಷ ಸಯ್ಯದ್‌ಜುಬೇರ್ ಎಸ್. ಕೆರೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಬಿರಾದಾರ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ. ಗೌರವಾಧ್ಯಕ್ಷ ವಿಶ್ವನಾಥ ಬೆಳ್ಳನವರ, ಕಾರ್ಯಾಧ್ಯಕ್ಷ ಪ್ರಕಾಶ ಗೊಂಗಡಿ, ಹಿರಿಯ ಉಪಾಧ್ಯಕ್ಷ ರಾಜಶೇಖರ ದೈವಾಡಿ, ಗಂಗಾಧರ ಜೇವೂರ, ಉಪಾಧ್ಯಕ್ಷ ಎಸ್.ಎಸ್. ತೇರದಾಳ, ಸಂತೋಷ ರಾಠೋಡ, ಸಿದ್ದಲಿಂಗ ಹಂಚಿನಾಳ, ಕ್ರೀಡಾ ಕಾರ್ಯದರ್ಶಿ ನಿಜು ಮೇಲಿನಕೇರಿ, ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಮಾಡಗಿ, ಸಂಘಟನಾ ಕಾರ್ಯದರ್ಶಿ ಶಿವಾನಂದ ಮಗ್ಗದ, ಚಂದ್ರಕಾಂತ ಬಿ. ಗಣೇಶ ಡೊಬಳೆ, ನಿರ್ದೇಶಕ ಸದಾನಂದ ಬಡಿಗೇರ, ವಿಜಯಕುಮಾರ ಬಿಸನಾಳ, ವಿಶ್ವನಾಥ ಮೈತ್ರಿ, ಎಂ.ಎ. ಶೇಖ, ವಿಜಯಾನಂದ ಮುದ್ದೇಬಿಹಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net