

ಶೃಂಗೇರಿ: ಮೂರು ದಿನ ಸರ್ಕಾರಿ ರಜೆ ಇರುವುದರಿಂದ ಶನಿವಾರ ಶ್ರೀ ಶಾರದಾಂಬಾ ದೇಗುಲದಲ್ಲಿ ಭಕ್ತರು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಗಾಂಧಿ ಮೈದಾನ ವಾಹನಗಳಿಂದ ತುಂಬಿಹೋಗಿತ್ತು. ಕರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರ ಆಧಾರ್ ಕಾರ್ಡ್ ತಪಾಸಣೆ ಮಾಡಿ, ಮಾಸ್ಕ್ ಧರಿಸಿದವರನ್ನು ಮಾತ್ರ ಮಠದ ಒಳಗೆ ಬಿಡಲಾಗುತ್ತಿದೆ. ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತು ಶಾರದೆ ಪ್ರವಾಸಿಗರು ದರ್ಶನ ಪಡೆದರು. ಮಠದ ಸುತ್ತಮುತ್ತಲಿರುವ ಶ್ರೀ ಮಲಹಾನಿಕರೇಶ್ವರ ದೇವಾಲಯ, ಶ್ರೀ ಕಾಳಿಕಾಂಬ, ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ, ಶ್ರೀ ದುರ್ಗಾಂಬ ದೇವಾಲಯಗಳಿಗೂ ಪ್ರವಾಸಿಗರು ಭೇಟಿ ನೀಡಿದರು. ಭಕ್ತರು ನರಸಿಂಹವನದಲ್ಲಿ ಜಗದ್ಗುರುಗಳ ಆಶೀರ್ವಾದ ಪಡೆದರು. ಪಟ್ಟಣದ ಹಲವು ಎಟಿಎಂನಲ್ಲಿ ನಗದು ಇಲ್ಲದೆ ಪ್ರವಾಸಿಗರು ಹಣದ ಕೊರತೆಯಿಂದ ಪರದಾಡುವಂತಾಯಿತು.