ಈಜು ಸ್ಪರ್ಧೆಯಲ್ಲಿ 4 ಸ್ವರ್ಣ

rishith
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಧಾರವಾಡ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಕ್ರೀಡಾ ಕೂಟದ ಈಜು ಸ್ಪರ್ಧೆಯ 17 ವಯೋಮಿತಿ ವಿಭಾಗದಲ್ಲಿ ಹುಬ್ಬಳ್ಳಿ ವಿಶ್ವೇಶ್ವರನಗರದ ಎನ್.ಕೆ. ಠಕ್ಕರ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ರಿಷಿತ್ ದೇಸಾಯಿ 4 ಸ್ವರ್ಣ ಪದಕಗಳನ್ನು ಗೆದ್ದಿದ್ದಾನೆ.

100 ಮೀಟರ್ ಫ್ರೀ ಸ್ಟೈಲ್, 100 ಮೀ. ಬ್ರೆಸ್ಟ್​ಸ್ಟ್ರೋಕ್, 800 ಮೀ. ಫ್ರೀ ಸ್ಟೈಲ್ ಹಾಗೂ 4*100 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಸ್ವರ್ಣ ಪದಕ ಗಳಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಧಾರವಾಡ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಶಿವಗಿರಿ ಈಜುಗೊಳದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net