ರಿಷಿಕಾ ಕುಂದೇಶ್ವರ, ಶ್ರೀನಿಧಿ ಅನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿಗೆ ಆಯ್ಕೆ

mng--21 may Rishika
Published on

ಮಂಗಳೂರು: ಮಂಗಳೂರು ಸಿಟಿ ರೋಟರಿ ಕ್ಲಬ್ ನ ಅನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿಗೆ ಶಿಕ್ಷಣ ಆ್ಯಪ್ ಡೆವಲಪರ್ ಶ್ರೀನಿಧಿ ಹಾಗೂ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರ ಆಯ್ಕೆಯಾಗಿದ್ದಾರೆ.


ಕೊಡಿಯಾಲಬೈಲ್ ಉತ್ಸವ ಹೋಟೆಲ್ ಸಭಾಂಗಣದಲ್ಲಿ ಮೇ 22ರಂದು ರಾತ್ರಿ 8ಕ್ಕೆ ರೋಟರಿ ಅಧ್ಯಕ್ಷ ಪ್ರಶಾಂತ್ ರೈ, ಪ್ರಧಾನ ಕಾರ್ಯದರ್ಶಿ ಗಣೇಶ್, ಸ್ಥಾಪಕಾಧ್ಯಕ್ಷ ಡಾ.ರಂಜನ್ ಶೆಟ್ಟಿ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಪ್ರಶಸ್ತಿ ಪ್ರದಾನ ಮಾಡುವರು.


ಮೇ ತಿಂಗಳು ಯುವ ಸೇವಾ ಮಾಸ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜೇಂದ್ರ ಕಲ್ಬಾವಿ ಅವರು ತಮ್ಮ ಹೆತ್ತವರಾದ ಅನಂತ ಕಲ್ಬಾವಿ ಸುಮಿತ್ರಾ ಕಲ್ಬಾವಿ ಹೆಸರಲ್ಲಿ ಪ್ರಶಸ್ತಿ ಆರಂಭಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net