

ರಿಪ್ಪನ್‌ಪೇಟೆ: ಕೋಡೂರು ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಉಮೇಶ್, ಉಪಾಧ್ಯಕ್ಷರಾಗಿ ಸುಧಾಕರ ಆಯ್ಕೆಯಾದರು.
ಒಟ್ಟು 13 ಸದಸ್ಯ ಬಲದ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಉಮೇಶ್ 9 ಮತ ಹಾಗೂ ಬಿಜೆಪಿ ಬೆಂಬಲಿತ ಶೇಖರಪ್ಪ 4 ಮತ ಮತ್ತು ಉಪಾಧ್ಯಕ್ಷಕ್ಕೆ ಸುಧಾಕರ ಅವಿರೋಧವಾಗಿ ಆಯ್ಕೆಯಾದರು.
ಹುಂಚ ಗ್ರಾಪಂ: ಅಧ್ಯಕ್ಷರಾಗಿ ಸುಮಂಗಲಾ, ಉಪಾಧ್ಯಕ್ಷರಾಗಿ ವೆಂಕಟೇಶ್ ಆಯ್ಕೆಯಾದರು. ಒಟ್ಟು 13 ಸದಸ್ಯ ಬಲದ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಸುಮಂಗಲಾ, ವೆಂಕಟೇಶ್‌ಗೆ ತಲಾ 7 ಮತ ಹಾಗೂ ಬಿಜೆಪಿ ಬೆಂಬಲಿತ ಆಶಾ, ಶ್ರೀಧರ್‌ಗೆ ತಲಾ 5 ಮತಗಳು ದೊರೆತವು. ಒಂದು ಮತ ತಿರಸ್ಕೃತವಾಗಿದೆ ಎಂದು ಚುನಾವಣಾಧಿಕಾರಿ ನಾಗರಾಜ್ ತಿಳಿಸಿದರು.
ಚಿಕ್ಕಜೇನಿ ಗ್ರಾಪಂ: ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎನ್.ಪಿ.ರಾಜು, ಉಪಾಧ್ಯಕ್ಷರಾಗಿ ಸುಜಾತಾ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 9 ಸದಸ್ಯ ಬಲವುಳ್ಳ ಗ್ರಾಪಂ. ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಕಾರ್ಯನಿರ್ವಹಿಸಿದರು.
ಬೆಳ್ಳೂರು ಗ್ರಾಪಂ: ಅಧ್ಯಕ್ಷರಾಗಿ ಹೇಮಾವತಿ, ಉಪಾಧ್ಯಕ್ಷರಾಗಿ ತಿಮ್ಮಪ್ಪ ಬೆಳ್ಳೂರು ಅವಿರೋಧ ಆಯ್ಕೆಯಾದರು. ಒಟ್ಟು 10 ಸದಸ್ಯ ಬಲದ ಗ್ರಾಪಂ ಚುನಾವಣಾಧಿಕಾರಿಯಾಗಿ ಶಿವಪ್ರಕಾಶ್ ಕಾರ್ಯನಿರ್ವಹಿಸಿದರು.