ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ನಗರದ ಎಂ.ಜಿ.ರಸ್ತೆಯ ಆಜಾದ್ ಚೌಕದ ರಸ್ತೆ ತಿರುವಿನಲ್ಲಿರುವ ಜುವೆಲ್ಲರ್ಸ್‌ನಲ್ಲಿ ಶುಕ್ರವಾರ ಬೆಳಗ್ಗೆ 11ರ ಸುಮಾರಿಗೆ ಉಂಗುರ ಖರೀದಿ ನೆಪದಲ್ಲಿ ಬಂದಿದ್ದವ 2 ಉಂಗುರಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.
ತೋರಿಸಲು ಟೇಬಲ್ ಮೇಲೆ ಇಟ್ಟಿದ್ದ ಒಂದು ಲಕ್ಷ ರೂ.ಗೂ ಅಧಿಕ ಮೌಲ್ಯದ ಎರಡು ಚಿನ್ನದ ಉಂಗುರಗಳನ್ನು ಖದೀಮ ಮಾಲೀಕನ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ತೆಗೆದುಕೊಂಡು ಕಾಲ್ಕಿತ್ತಿದ್ದಾನೆ.
ಅಂಗಡಿಯಲ್ಲಿ ಮಾಲೀಕ ನಾಮಾ ಸಾಯಿನಾಥ್ ನಗರಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳ ಹಾಗೂ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ತನಿಖೆ ಶುರುಮಾಡಿದ್ದಾರೆ.