ಮಳೆಯ ಅಬ್ಬರ:ಜಾಂಬೋಟಿ ಚೋರ್ಲಾ ಮಾರ್ಗದಲ್ಲಿ ಸಂಚಾರ ಬಂದ್!

Screenshot_20240718_225858_WhatsApp.jpg
Published on

ಬೆಳಗಾವಿ:ಜಾಂಬೋಟಿ ಹಾಗೂ ಚೋರ್ಲಾ ಪ್ರದೇಶ ವ್ಯಾಪ್ತಿಗಳಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ವಾಹನಗಳ ಸಂಚಾರದಲ್ಲಿ ಅಲ್ಲಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸೇತುವೆಗಳು ಶಿಥಿಲಗೊಂಡಿವೆ. ಈಹಿನ್ನೆಲೆಯಲ್ಲಿ ಬೆಳಗಾವಿ ನಗರದಿಂದ ಜಾಂಬೋಟಿ ಚೋರ್ಲಾ ಮಾರ್ಗವಾಗಿ ಗೋವಾ ಕಡೆಗೆ ಸಂಚರಿಸುವ ಎಲ್ಲಾ ಭಾರಿ ವಾಹನಗಳು ಪೀರನವಾಡಿ ಕ್ರಾಸ್ ಹತ್ತಿರ ಎಡ ತಿರುವು ಪಡೆದುಕೊಂಡು ಖಾನಾಪುರ ಮಾರ್ಗವಾಗಿ ಮುಂದೆ ಸಂಚರಿಸುವಂತೆ ಡಿಸಿಪಿ ಪಿ.ವಿ.ಸ್ನೇಹಾ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net