

-ಮನೆಸುತ್ತುವರಿದ ಒಳಚರಂಡಿ ನೀರು, ಸಾಂಕ್ರಾಮಿಕ ರೋಗಗಳು ತಗಲು ಭಯ ಉಂಟಾಗಿದೆ
ಬೆಳಗಾವಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಒಳ ಚರಂಡಿ ನೀರು ಮನೆಗೆ ನುಗ್ಗಿ ಸುತ್ತುವರಿದಿದೆ. ದುರ್ವಾಸನೆ ಮಧ್ಯ ಎರಡು ದಿನಗಳಿಂದ ವಾಸಿಸುತ್ತಿದ್ದೇವೆ. ನಮಗೆಲ್ಲಾ ಡೆಂಘೆ ರೋಗ ತಗಲು ಭಯ ಉಂಟಾಗಿದೆ.
ಇದು ಭಾಗ್ಯನಗರದ ಮೂರನೇ ಕ್ರಾಸ್ ನಲ್ಲಿ ವಾಸಿಸುತ್ತಿರುವ ಸುಮಾರು 90 ಮತ್ತು 85 ವರ್ಷದ ವಯಸ್ಸಿನ ವಯೋವೃದ್ಧರ ಅಳಲು.
ಮಕ್ಕಳು,ಮೊಮ್ಮಕ್ಕಳು ಬೇರೆ ಊರುಗಳಲ್ಲಿರುವದರಿಂದ ನಮ್ಮ ರಕ್ಷಣೆಗೆ ಯಾರು ಇಲ್ಲದಂತಾಗಿದೆ. ಒಳಚರಂಡಿ, ಮಳೆ ನೀರು ಮನೆ ಸುತ್ತಲೂ ಮಡಗಟ್ಟಿ ನಿಂತಿದೆ. ಹರಿದು ಹೋಗಲು ಮಾರ್ಗ ಇಲ್ಲ. ಚರಂಡಿಗಳು ಬ್ಲಾಕ್ ಆಗಿವೆ. ವಾಸಿಸುವ ಮನೆ ಒಳ ಆವರಣಕ್ಕೆ ನುಗ್ಗಿ ಆವಂತರ ಸೃಷ್ಟಿಸಿದೆ. ಈ ಸಮಸ್ಯೆಯಿಂದ ಜಿಲ್ಲಾಧಿಕಾರಿಗಳೇ ನಮ್ಮನ್ನು ರಕ್ಷಿಸಿ