ಬಾರ್ಕೂರಿನಲ್ಲಿ ಋಗು ಉಪಾಕರ್ಮ ಕಾರ್ಯಕ್ರಮ

bmr
Published on

ಬ್ರಹ್ಮಾವರ: ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಬ್ರಾಹ್ಮಣ ಸವಾಜದವರಿಂದ ದೇವಸ್ಥಾನದ ಅರ್ಚಕ ಪ್ರಕಾಶ್ ಪುರೋಹಿತ್ ಅವರ ಪ್ರಧಾನ ಆಚಾರ್ಯತ್ವದಲ್ಲಿ ಆಡಳಿತ ಮೊಕ್ತೇಸರ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ನೇತೃತ್ವದಲ್ಲಿ ಋಗು ಉಪಾಕರ್ಮ ಶನಿವಾರ ಜರುಗಿತು.

ಉಪಾಕರ್ಮದ ಅಂಗವಾಗಿ ಉತ್ಸರ್ಜನ ಹೋಮ, ದೇವ ತರ್ಪಣ, ಗುರುತರ್ಪಣ, ಋಷಿ ತರ್ಪಣ, ಪಿತೃ ತರ್ಪಣ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ನಡೆಯಿತು. ವಿಶ್ವಬ್ರಾಹ್ಮಣ ಸವಾಜದ ನೂರಾರು ಮಂದಿ ಸಾಮೂಹಿಕವಾಗಿ ಯಜ್ಞೋಪವೀತ ಧಾರಣೆ ಜರುಗಿತು. ನೂತನ ವಟುಗಳಿಗೆ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯಿತು.

ದೇವಸ್ಥಾನ ಆಡಳಿತ ಮಂಡಳಿ 2ನೇ ಮೊಕ್ತೇಸರ ಪ್ರವೀಣ್ ಆಚಾರ್ಯ ರಂಗನಕೆರೆ, ಸದಸ್ಯರಾದ ಬಂಡೀಮಠ ಪ್ರಭಾಕರ ಆಚಾರ್ಯ ಮತ್ತು ಶ್ರೀ ಕಾಳಿಕಾಂಬಾ ಯುವಕ ಸೇವಾದಳದ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net