ತೆರಿಗೆ ಹಣ ಸಮರ್ಪಕ ಬಳಕೆಯಾಗಲಿ: ಮಾಹಿತಿ ಹಕ್ಕು ವೇದಿಕೆ ರಾಜ್ಯಾಧ್ಯಕ್ಷ ಎನ್.ಹೇಮಂತ್ ಒತ್ತಾಯ

Right to Information Forum press conference Mandya
Published on

ಮಂಡ್ಯ: ಸಾರ್ವಜನಿಕರು ಕಟ್ಟುವ ತೆರಿಗೆ ಹಣ ಸಮರ್ಪಕ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಮಾಹಿತಿ ಹಕ್ಕು ವೇದಿಕೆ ಹೋರಾಟ ನಡೆಸುತ್ತಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಎನ್.ಹೇಮಂತ್ ಹೇಳಿದರು.

ಸರ್ಕಾರಿ ಕಚೇರಿಯಲ್ಲಿನ ನ್ಯೂನ್ಯತೆ, ಅಧಿಕಾರಿಗಳ ಕರ್ತವ್ಯ ಲೋಪ, ಕೆಲಸಕ್ಕೆ ತಡವಾಗಿ ಬರುವುದು, ಸೂಚನೆಯಂತೆ ಐ.ಡಿ ಕಾರ್ಡ್ ಮತ್ತು ಆರ್‌ಟಿಐ ನಾಮಫಲಕ ಅಳವಡಿಸದಿರುವುದು, ಲಂಚಕ್ಕಾಗಿ ಸಾರ್ವಜನಿಕರನ್ನು ಅಲೆದಾಡಿಸುವುದು, ಆದಾಯಕ್ಕೆ ಮೀರಿದ ಆಸ್ತಿ ಪಾಸ್ತಿ ಗಳಿಸುತ್ತಿರುವುದನ್ನು ವೇದಿಕೆ ಗಮನಿಸುತ್ತದೆ. ಇಂತಹ ಲೋಪದ ವಿರುದ್ಧ ಹೋರಾಟ ಮಾಡಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಾರೂ ಸದಸ್ಯರನ್ನು ವೇದಿಕೆಯಲ್ಲಿದ್ದಾರೆ. ಅದರಂತೆ ಜಿಲ್ಲಾವಾರು ಶಾಖೆಗಳನ್ನು ಪ್ರಾರಂಭಿಸಲಾಗುತ್ತಿದೆ. ನಮ್ಮ ಹೋರಾಟಕ್ಕೆ ಸಾರ್ವಜನಿಕರ ಬೆಂಬಲ ಸಿಕ್ಕರೆ ಇನ್ನಷ್ಟು ಪರಿಣಾಮಗೊಳಿಸಬಹುದು ಎಂದು ವಿವರಿಸಿದರು.

ನೇಮಕ: ಎಂ.ಚಂದ್ರಶೇಖರ್(ಗೌರವಾಧ್ಯಕ್ಷ), ಬಿ.ಟಿ.ಬಸವರಾಜು(ಜಿಲ್ಲಾಧ್ಯಕ್ಷ), ಪಿ.ಎನ್.ಅಶೋಕ್‌ಕುಮಾರ್(ಉಪಾಧ್ಯಕ್ಷ), ಪಿ.ಎಂ.ಅಂಜಲಿ(ಉಪಾಧ್ಯಕ್ಷೆ), ಎಚ್.ಟಿ.ಶಿವಕುಮಾರ್(ಪ್ರಧಾನ ಕಾರ್ಯದರ್ಶಿ), ಎಂ.ಎನ್.ಕೀರ್ತಿ(ಸಹ ಕಾರ್ಯದರ್ಶಿ), ಎಚ್.ಸಿ.ಚಂದ್ರಶೇಖರ್(ಖಚಾಂಜಿ), ಜಯೇಂದ್ರ, ಎಚ್.ಆರ್.ರಾಜೇಶ್, ಎಂ.ವಿ.ಕುಮಾರ್, ಯು.ಪ್ರಶಾಂತ್, ಟಿ.ಮಂಜುನಾಥ್, ಎಚ್.ಎಸ್.ಕುಮಾರ್, ಎಸ್.ವಿ.ನವೀನ್, ಅರುಣ್‌ಕುಮಾರ್, ಆರ್.ರವಿ, ಆರ್.ಟಿ.ಮೂರ್ತಿ(ಸದಸ್ಯರು) ಅವರನ್ನು ನೇಮಿಸಲಾಗಿದೆ.

ವೇದಿಕೆ ರಾಜ್ಯ ಸಂಚಾಲಕ ಚೇತನ್‌ಕುಮಾರ್, ಮೈಸೂರು ಜಿಲ್ಲಾಧ್ಯಕ್ಷ ಪ್ರಶಾಂತ್, ಡಾ.ಶ್ರೀನಿವಾಸ್ ಶೆಟ್ಟಿ, ಪ್ರವೀಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net