

ಮಂಗಳೂರು : ದ.ಕ ಜಿಲ್ಲಾ ಪೊಲೀಸ್ ಘಟಕದಿಂದ 2022-23ನೇ ಸಾಲಿನ ನವೆಂಬರ್ ಮೊದಲ ವಾರ ಜಿಲ್ಲಾ ಕವಾಯತು(ಡಿ.ಎ.ಆರ್) ಮೈದಾನದಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರ ನಡೆಯಲಿದೆ. ಡಿ.ಎ.ಆರ್. ಕಚೇರಿಯಲ್ಲಿ ಅಥವಾ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಅರ್ಜಿ ಪಡೆದು ಅ.10ರೊಳಗೆ ಸಲ್ಲಿಸಬೇಕು. ಅರ್ಜಿಯ ನಿಯಮಾವಳಿಯಂತೆ ಪರಿಶೀಲಿಸಿ ಅರ್ಹತೆಯುಳ್ಳ ನಾಗರಿಕರಿಗೆ ಒಂದು ವಾರ ಪ್ರತೀ ದಿನ ಬೆಳಗ್ಗೆ ಅಥವಾ ಮೈದಾನದಲ್ಲಿ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆ ಅಥವಾ ಡಿ.ಎ.ಆರ್. ಕಚೇರಿ ಹಾಗೂ ದೂರವಾಣಿ ಸಂಖ್ಯೆ:0824-2220512 ಸಂಪರ್ಕಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.