ರಿಧನ್ವಾ ಡಿ.ಗಾಣಿಗಗೆ ಬೆಳ್ಳಿ ಪದಕ

kick boxing
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ರಿಧನ್ವಾ ಡಿ.ಗಾಣಿಗ ಬೆಳ್ಳಿ ಪದಕ ಗಳಿಸಿದ್ದಾರೆ.
Published on

ಬಂಟ್ವಾಳ: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ವತಿಯಿಂದ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ರಾಜ್ಯ ಪ್ರತಿನಿಧಿಸಿದ್ದ ರಿಧನ್ವಾ ಡಿ.ಗಾಣಿಗ ಬೆಳ್ಳಿ ಪದಕ ಗಳಿಸಿದ್ದಾರೆ.

ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆಟ್ಸ್ ರ್ ವಿದ್ಯಾರ್ಥಿನಿ ಆಗಿರುವ ರಿಧನ್ವಾ ಡಿ.ಗಾಣಿಗ 50 ಬಾಲಕಿಯರ ಲೈಟ್ ಕಾನ್ಟೆಕ್ಸ್ ವಿಭಾಗದಲ್ಲಿ ಕರ್ನಾಟಕ ಪ್ರತಿನಿಧಿಸಿದ್ದರು. ಇವರು ಮಂಗಳೂರು ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆಟ್ಸ್ ರ್ ಸಂಸ್ಥೆ ಮುಖ್ಯಶಿಕ್ಷಕ ನಿತಿನ್ ಎನ್.ಸುವರ್ಣ ಮತ್ತು ಶಿಕ್ಷಕ ಶಿವಪ್ರಸಾದ್ ತರಬೇತಿ ನೀಡಿದ್ದಾರೆ. ಮಂಗಳೂರು ಯೆಯ್ಯಡಿ ನಿವಾಸಿ ಧನ್‌ರಾಜ್ ಮತ್ತು ಪಾಣೆಮಂಗಳೂರು ಸೌಮ್ಯಾ ಮರ್ಧೋಳಿ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net