ಆಯ ತಪ್ಪಿ ಬಿದ್ದು ಬೈಕ್ ಸವಾರ ಸಾವು

4Athanigrameen1 CRIME
Published on

ಅಥಣಿ ಗ್ರಾಮೀಣ:ಬೈಕ್ ಮೇಲಿಂದ ಆಯ ತಪ್ಪಿ ಬಿದ್ದು ರಡ್ಡೇರಹಟ್ಟಿ ಗ್ರಾಮದ ಬಾಳಾಸಾಬ ಕರೆಪ್ಪ ಕುನ್ನರ (22) ಮೃತಪಟ್ಟ ಘಟನೆ ಮಂಗಳವಾರ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಬಳಿ ಅಥಣಿ-ಜಮಖಂಡಿ ಸಂಪರ್ಕ ರಸ್ತೆ ಮೇಲೆ ನಡೆದಿದೆ. ರಡ್ಡೇರಹಟ್ಟಿ ಗ್ರಾಮದ ಕಡೆಯಿಂದ ಅಥಣಿ ಕಡೆಗೆ ತೆರಳುತ್ತಿರುವ ವೇಳೆ ಘಟನೆ ನಡೆದಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net