

ಅಳ್ನಾವರ: ಜೀಪ್ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟು ಏಳು ಜನ ಗಾಯಗೊಂಡ ಘಟನೆ ತಾಲೂಕಿನ ಕಡಬಗಟ್ಟಿ ಗ್ರಾಮದ ವನಕಿಮಡ್ಡಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಪಟ್ಟಣದ ಇಂದಿರಾನಗರದ ಸಿದ್ದು ಭೀಮಪ್ಪ ನಾಯಕ (32) ಮೃತಪಟ್ಟ ವ್ಯಕ್ತಿ. ಡಿಕ್ಕಿಯ ರಭಸಕ್ಕೆ ಜೀಪ್ ಪಲ್ಟಿಯಾಗಿದೆ. ಧಾರವಾಡ ಕಡೆಯಿಂದ ವೇಗವಾಗಿ ಬರುತ್ತಿದ್ದ ಜೀಪ್, ಅಳ್ನಾವರ ಕಡೆಯಿಂದ ತೆರಳುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಿದ್ದು ಮೃತಪಟ್ಟಿದ್ದಾನೆ.
ಹಿಂಬದಿ ಬೈಕ್ ಸವಾರ ಸರ್ವರ್ ನಜೀರ್ಅಹ್ಮದ್ ಅಂಬಡಗಟ್ಟಿ ಹಾಗೂ ಜೀಪ್ನಲ್ಲಿದ್ದ ತಮಿಳುನಾಡು ಮೂಲದ ಆರು ಜನರಿಗೆ ಗಾಯಗಳಾಗಿದ್ದು, ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.