ಬೈಕ್ ಅಪಘಾತದಲ್ಲಿ ಸವಾರ ಸಾವು

bike accident 1
Published on

ಹುಬ್ಬಳ್ಳಿ: ನಗರ ಹೊರವಲಯದ ರಿಂಗ್ ರೋಡ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ.

ಅಣ್ಣಿಗೇರಿ ಹೊರಕೇರಿ ಓಣಿಯ ಸಣ್ಣದಾವಲಸಾಬ್ ಲೋಕಾಪುರ(62) ಮೃತರು. ರಿಂಗ್ ರೋಡ್

ಹತ್ತಿರದ ಹಳಿಯಾಳ ಬ್ರಿಡ್ಜ್ ಬಳಿ ಗದಗ ಕಡೆಯಿಂದ ಗಬ್ಬೂರ ಕಡೆ ಹೊರಟ್ಟಿದ್ದಾಗ ಎರಡು ಬೈಕ್‌ಗಳ ನಡುವೆ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಣ್ಣದಾವಲಸಾಬ್ ಅವರನ್ನು ಕೆಎಂಸಿಆರ್‌ಐಗೆ ಚಿಕಿತ್ಸೆಗೆ ಸಾಗಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net