

ಕೊಳ್ಳೇಗಾಲ: ಪಟ್ಟಣದ ಹೊರವಲಯದ ಮುಖ್ಯ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಭಾನುವಾರ ಅಪಘಾತ ಸಂಭವಿಸಿ, ಒಬ್ಬ ಸವಾರ ಸಾವನ್ನಪ್ಪಿದ್ದಾನೆ.
ತಾಲೂಕಿನ ಸಿಂಗನಲ್ಲೂರು ಗ್ರಾಮದ ರಾಚಪ್ಪ(32) ಮೃತ. ಪಟ್ಟಣದ ನೂರ್ ಮೋಹಲ್ಲಾ ಸೈಯದ್ ಇಫ್ರಾನ್(26), ಸೈಯದ್ ಸುಹೇಲ್(30) ಗಾಯಗೊಂಡ ಬೈಕ್ ಸವಾರರು. ಮೃತ ಬೈಕ್ ಸವಾರ ಭಾನುವಾರ ಕೊಳ್ಳೇಗಾಲದಿಂದ ಸಿಂಗಾನಲ್ಲೂರು ಗ್ರಾಮಕ್ಕೆ ತೆರಳುವಾಗ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಬೈಕ್ ಸವಾರ ರಾಚಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದ ಇಬ್ಬರು ಸವಾರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.