

ಹಾನಗಲ್ಲ: ಬೈಕ್ಗಳ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಸವಾರ ಗಾಯಗೊಂಡ ಘಟನೆ ತಾಲೂಕಿನ ಗೆಜ್ಜಿಹಳ್ಳಿ ಸಮೀಪದ ಮೂರರ ಕ್ರಾಸ್ನಲ್ಲಿ ಬುಧವಾರ ಸಂಭವಿಸಿದೆ. ಶಾಡಗುಪ್ಪಿ ಗ್ರಾಮದ ರೈತ ಮಲ್ಲಿಕಾರ್ಜುನ ಗಂಗಪ್ಪ ಹಲಸೂರ (38) ಮೃತ ಬೈಕ್ ಸವಾರ. ಮಲ್ಲಿಕಾರ್ಜುನ ಶಾಡಗುಪ್ಪಿಯಿಂದ ಹಾನಗಲ್ಲಿಗೆ ಬೈಕ್ನಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಇನ್ನೊಂದು ಬೈಕ್ನ ಸವಾರನ ಕಾಲು ಮುರಿದಿದ್ದು, ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ.
ನೇತ್ರದಾನ: ಅಪಘಾತದ ದುಃಖದ ಮಧ್ಯೆಯೂ ಮಲ್ಲಿಕಾರ್ಜುನ ಹಲಸೂರ ಅವರ ಕುಟುಂಬದವರು ಮೃತನ ಕಣ್ಣುಗಳನ್ನು ಅಕ್ಕಿಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗದ ಸಹಕಾರದೊಂದಿಗೆ ಶಿರಸಿಯ ಲಯನ್ಸ್ ನಯನ ಭಂಡಾರಕ್ಕೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.