ಅಪಘಾತದಲ್ಲಿ ಸವಾರ ಸಾವು

Accident
Published on

ಮೈಸೂರು : ನಗರದ ಗನ್‌ಹೌಸ್ ವೃತ್ತದ ಬಳಿ ಶುಕ್ರವಾರ ಬೆಳಗ್ಗೆ ಹಾಲಿನ ಈಚರ್ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ.


ಚಾಮರಾಜಮೊಹಲ್ಲಾ ನಿವಾಸಿ ಹಾಗೂ ಆಟೋರಿಕ್ಷಾ ಚಾಲಕ ರವಿಕುಮಾರ್(32) ಮೃತ ಸವಾರ. ಗಾಯಗೊಂಡಿರುವ ಹಿಂಬದಿ ಸವಾರ ಸಿದ್ದು(20) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬೆಳಗ್ಗೆ 4 ಗಂಟೆ ಸುಮಾರಿಗೆ ರವಿಕುಮಾರ್, ಸಂಬಂಧಿ ಸಿದ್ದು ಅವರೊಂದಿಗೆ ತರಕಾರಿ ತರಲು ಎಂ.ಜಿ. ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರಿಗೆ ಬಂದ ಹಾಲಿನ ಗಾಡಿ ಡಿಕ್ಕಿ ಹೊಡೆದಿದೆ.

ಚಾಲನೆ ವೇಳೆ ಇಬ್ಬರು ಹೆಲ್ಮೆಟ್ ಹಾಕಿರಲಿಲ್ಲ ಎಂದು ಪೊಲಿಸರು ತಿಳಿಸಿದ್ದಾರೆ. ಕೆ.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net