

ಹುಬ್ಬಳ್ಳಿ: ಗೂಡ್ಸ್ ವಾಹನ ದ್ವಿಚಕ್ರ ವಾಹನ ಸವಾರನ ತಲೆ ಮೇಲೆ ಹರಿದು ಸ್ಥಳದಲ್ಲಿಯೇ ಆತ ಮೃತಪಟ್ಟ ಘಟನೆ ಇಲ್ಲಿಯ ಗೋಕುಲ ರಸ್ತೆಯ ಶಾನಭಾಗ ಹೋಟೆಲ್ ಎದುರಿನ ಮೇಲ್ಸೇತುವೆ ಹತ್ತಿರ ಸೋಮವಾರ ಸಂಭವಿಸಿದೆ.
ಸೊರಬದಮಠಗಲ್ಲಿಯ ಕಿರಣ ಬದ್ದಿ (41) ಮೃತರು. ಮೃತ ಕಿರಣ ಶಾನಭಾಗ ಹೋಟೆಲ್ ಕಡೆಯಿಂದ ಹೊಸೂರು ಕಡೆ ಹೋಗುವಾಗ ಹಿಂದಿನಿಂದ ಗೂಡ್ಸ್ ವಾಹನ ಚಲಾಯಿಸಿಕೊಂಡು ಬಂದ ಮಂಡ್ಯ ಜಿಲ್ಲೆಯ ಮಹೇಶ ಎಂಬಾತ ಡಿಕ್ಕಿ ಹೊಡೆದಿದ್ದಾನೆ. ಬಳಿಕ ನಿಯಂತ್ರಣ ತಪ್ಪಿ ಹಿಂಭಾಗದ ಚಕ್ರ ಕಿರಣನ ತಲೆ ಮೇಲೆ ಹರಿದು ಮೃತಪಟ್ಟಿದ್ದಾರೆ. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.