ಟ್ರಾೃಕ್ಟರ್‌ಗೆ ಸ್ಕೂಟಿ ಡಿಕ್ಕಿಯಿಂದ ಸವಾರ ಸಾವು

crime
Published on

ಹುಬ್ಬಳ್ಳಿ: ಕಸ ಸಾಗಿಸುತ್ತಿದ್ದ ಮಹಾನಗರ ಪಾಲಿಕೆ ಟ್ರ್ಯಾಕ್ಟರ್‌ಗೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಕೆಎಂಸಿಆರ್‌ಐ ಹಿಂದಿನ ಗೇಟ್ ಬಳಿ ಸೋಮವಾರ ನಡೆದಿದೆ.

ಸ್ಕೂಟಿ ಚಲಾಯಿಸುತ್ತಿದ್ದ ಅದ್ವೈತ ಬಾಗಲಕೋಟ (19) ಮೃತಪಟ್ಟಿದ್ದಾನೆ. ಹಿಂಬದಿ ಸವಾರ ವಿವೇಕ ಗುಡಿ (19) ಗಂಭೀರವಾಗಿ ಗಾಯಗೊಂಡಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net