ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸಾವು

14-09-25--krs1 nagendra (1)
ನಾಗೇಂದ್ರ
Published on

ಕೆ.ಆರ್.ಸಾಗರ: ಸಮೀಪದ ಡಿಂಕಾ ಗ್ರಾಮದ ಬಳಿ ನಿಯಂತ್ರಣ ತಪ್ಪಿದ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸವಾರ ಸಾವನ್ನಪ್ಪಿದ್ದಾರೆ.

ಕಾಶಿಮುರಗನಹಳ್ಳಿ ಗ್ರಾಮದ ನಾಗೇಂದ್ರ(36) ಮೃತರು. ಇವರು ತಮ್ಮ ಬೈಕ್‌ನಲ್ಲಿ ಕೆ.ಆರ್.ಸಾಗರ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಕೆ.ಆರ್.ಸಾಗರ ಠಾಣೆ ಪಿಎಸ್‌ಐ ರಮೇಶ್ ಕರಕಿಟ್ಟೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net