

ಕುಂದಾಪುರ: ಚಿತ್ತೂರು-ಆಲೂರು ಕ್ರಾಸ್‌ನಲ್ಲಿ ಕೃಷ್ಣಿ ಮತ್ತು ಗಿರಿಯ ಪೂಜಾರಿ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಅಳಿಯ ನಿರ್ಮಿಸಿಕೊಟ್ಟ ಕೃಷ್ಣಗಿರಿ ರಿಕ್ಷಾನಿಲ್ದಾಣ ಲೋಕಾರ್ಪಣೆ ಶನಿವಾರ ನಡೆಯಿತು.
ನಿವೃತ್ತ ಲೈನ್‌ಮನ್ ಉದಯ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕೃಷ್ಣಿ ಹಾಗೂ ಗಿರಿಯ ಪೂಜಾರಿ ಕುಟುಂಬಸ್ಥರ ಪರವಾಗಿ ಬಾಲಕೃಷ್ಣ ಪೂಜಾರಿ ಅವರನ್ನು ಗೌರವಿಸಲಾಯಿತು.
ಆಲೂರು- ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ವ್ಯವಸ್ಥಾಪಕ ಸಂಜೀವ ಪೂಜಾರಿ ಹಾಗೂ ಸುಮಿತ್ರಾ ಸಂಜೀವ ಪೂಜಾರಿ ದಂಪತಿ ರಿಕ್ಷಾ ನಿಲ್ದಾಣ ಉದ್ಘಾಟಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಆಲೂರು ರಘುರಾಮ ದೇವಾಡಿಗ, ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಹರ್ಕೂರು ಮಂಜಯ್ಯ ಶೆಟ್ಟಿ, ಪ್ರಮುಖರಾದ ನಾಗರಾಜ ಮಂಜ, ರವೀಂದ್ರ ಶೆಟ್ಟಿ, ದಿನಕರ ಉಡುಪ, ಸುರೇಶ ಪೂಜಾರಿ, ಚಂದ್ರ ಪೂಜಾರಿ, ಹಿರಿಯಣ್ಣ ಪೂಜಾರಿ ಹಾಗೂ ಸಂತೋಷ ಪೂಜಾರಿ ಉಪಸ್ಥಿತರಿದ್ದರು. ಸೀತಾರಾಮ ಜಿ. ಪೂಜಾರಿ ಸ್ವಾಗತಿಸಿದರು. ವಂಡಬಳ್ಳಿ ಜಯರಾಮ ಶೆಟ್ಟಿ ಪ್ರಸ್ತಾವನೆಗೈದರು. ಉದಯ ಜಿ.ಪೂಜಾರಿ ವಂದಿಸಿದರು. ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.