

ಪುತ್ತೂರು ಗ್ರಾಮಾಂತರ: ಯಾವ ಜಾತಿ, ಧರ್ಮದ ಬಗ್ಗೆ ನನ್ನ ವಿರೋಧವಿಲ್ಲ. ನಾನು ಹಿಂದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆದರೆ ಇನ್ನೊಂದು ಧರ್ಮವನ್ನು ನಾನು ವಿರೋಧ ಮಾಡುವುದಿಲ್ಲ. ಈ ದೇಶ ವಿಶ್ವಗುರುವಾಗಬೇಕಾದರೆ, ಅಭಿವೃದ್ಧಿ ಹೊಂದಬೇಕಾದರೆ ನಾವೆಲ್ಲರೂ ಸಹೋದರತೆಯಿಂದ ಬದುಕುವ ಅಗತ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಈಶ್ವರಮಂಗಲದಲ್ಲಿ ನಿರ್ಮಿಸಲಾದ ಆಟೋ ರಿಕ್ಷಾ ತಂಗುದಾಣ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಇಬ್ರಾಹಿಂ ಪಳ್ಳತ್ತೂರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಪಿ.ಸುಬ್ಬಯ್ಯ, ನೆಟ್ಟಣಿಗೆ ಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮೂಸನ್ ಕರ್ನೂರು, ಈಶ್ವರಮಂಗಲ ಬಿ.ಎಂ.ಎಸ್.ಆಟೋ ರಿಕ್ಷಾ ಚಾಲಕ ಮಾಲೀಕರ ಸಂದ ಅಧ್ಯಕ್ಷ ಹರೀಶ್ ಗೌಡ, ಮಧುರಾ ವಿದ್ಯಾಸಂಸ್ಥೆ ನಿರ್ದೇಶಕ ಅಬ್ದುಲ್ ರಹಿವಾನ್ ಮೇನಾಲ ಮತ್ತಿತರರಿದ್ದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮ ಮೇನಾಲ ಸ್ವಾಗತಿಸಿದರು.