ಸಾಮಾಜಿಕ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ : ಶಾಸಕಿ ಭಾಗೀರಥಿ ಮುರುಳ್ಯ ಮೆಚ್ಚುಗೆ

New Project (50)
Published on

ಕಡಬ: ಸಾಮಾಜಿಕ ಕ್ಷೇತ್ರದಲ್ಲಿ ರಿಕ್ಷಾ ಚಾಲಕರ ಪ್ರಾಮಾಣಿಕ ಸೇವೆ ಅನನ್ಯ. ಕರೊನಾ ಕಾಲಟ್ಟದಲ್ಲಿ ರಿಕ್ಷಾ ಚಾಲಕರು ಜೀವದ ಹಂಗು ತೊರೆದು ಜನರ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಕೊಲ ಗ್ರಾಮದ ಗೋಕುಲನಗರ ಎಂಬಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿ ರ್ಮಾಣವಾದ ಆಟೋ ನಿಲ್ದಾಣ ಮತ್ತು ಪುತ್ತೂರು ಎಸ್.ಆರ್.ಕೆ. ಲ್ಯಾಂಡರ್ಸ್‌ ವತಿಯಿಂದ ನಿ ರ್ಮಾಣವಾದ ಬಸ್ ತಂಗುದಾಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಎಸ್.ಆರ್.ಕೆ. ಲ್ಯಾಡರ್ಸ್‌ ಮಾಲೀಕ ಕೇಶವ ಅಮೈ ಶುಭಹಾರೈಸಿದರು. ಕೊಲ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ ಸುಭಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷ ಯತೀಶ್ ಸೀಗೆತ್ತಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂದೇಶ್, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಪುತ್ತೂರು ವಿಭಾಗದ ಜೂನಿಯರ್ ಇಂಜಿನಿಯರ್ ಹೊಳೆಬಸಪ್ಪ, ಬಿ.ಎಂ.ಎಸ್. ಆಟೋ ಚಾಲಕರ ಸಂದ ಅಧ್ಯಕ್ಷ ಶ್ರೀರಾಮ ಉಪಸ್ಥಿತರಿದ್ದರು.

ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಕೇಶವ ಅಮೈ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶ್ ಕೆವ್ಮಾರ ಸ್ವಾಗತಿಸಿದರು. ಸುದೀಶ್ ಪಟ್ಟೆ ನಿರೂಪಿಸಿದರು. ಪಿಡಿಒ ಸಂದೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net