ಗಾಳಿ ಮಳೆಗೆ ನೆಲಕ್ಕೊರಗಿದ ಭತ್ತ

3 kmp 02
ಮಳೆ-ಗಾಳಿಗೆ ಬೆಳಗೋಡ್‌ಹಾಳ್ ಭಾಗದ ಭತ್ತ ಬೆಳೆ ನೆಲಕ್ಕೊರಗಿರುವುದು.
Published on

ಕಂಪ್ಲಿ: ಈ ವರ್ಷದ ಮೊದಲ ಮಳೆಯಾಗಿ ಬುಧವಾರ ರಾತ್ರಿ 4.2ಮಿ.ಮೀ ಮಳೆ ಬಿದ್ದಿದೆ. ಮಳೆಯೊಂದಿಗೆ ಗಾಳಿ ಬೀಸಿದ್ದರಿಂದ ತಾಲೂಕಿನ ಕಂಪ್ಲಿ, ಅರಳಿಹಳ್ಳಿ, ಬೆಳಗೋಡ್‌ಹಾಳ್, ಕೊಟ್ಟಾಲ್ ಸೇರಿ ಕೆಲ ಭಾಗಗಳಲ್ಲಿ ಬೆಳೆದು ನಿಂತ ಭಾಗಶಃ ಭತ್ತ ಬೆಳೆ ನೆಲಕ್ಕೆ ಕುಸಿದಿದೆ.

ಕೆಲವಡೆ ಭತ್ತ ಬೆಳೆ ಹಾಲು ತುಂಬುವ ಹಂತದಲ್ಲಿದ್ದು ಇನ್ನು ಹದಿನೈದು ಇಪ್ಪತ್ತು ದಿನಗಳಿಗೆ ಕಟಾವಿಗೆ ಬರಲಿದೆ. ಈ ಸಮಯದಲ್ಲಿ ಗಾಳಿ, ಮಳೆಗೆ ಭತ್ತ ನೆಲಕ್ಕೆ ಬಿದ್ದಿದ್ದು ರೈತರಿಗೆ ಮತ್ತಷ್ಟು ಖರ್ಚು ಹೆಚ್ಚಿಸಿದೆ. ನೆಲಕ್ಕೆ ಬಿದ್ದಿರುವ ಭತ್ತ ಬೆಳೆಯನ್ನು ಎತ್ತಿ ಸೂಡು ಕಟ್ಟಬೇಕಿದೆ. ಕಳೆದ ಹಿಂಗಾರು ಬೆಳೆ ಕಟಾವು ಸಮಯದಲ್ಲಿ ನೆಲಕ್ಕೊರಗಿದ್ದರಿಂದ ಎಕರೆ ಭತ್ತವನ್ನು ಎತ್ತಿ ಸೂಡು ಕಟ್ಟಲು, ಕೊಯ್ಲಿಗೆ ಹೆಚ್ಚುವರಿ ಹಣ ವ್ಯಯಿಸಿ ರೈತರು ನಷ್ಟಕ್ಕೀಡಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net