ಭತ್ತದ ಬಣವೆಗಳು ಬೆಂಕಿಗಾಹುತಿ

11 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯುತ್ ತಂತಿಯಿ0ದ ಬೆಂಕಿಯ ಕಿಡಿ ಭತ್ತದ ಬಣವೆ ಮೇಲೆ ಬಿದ್ದು 4 ಭತ್ತದ ಬಣವೆಗಳು ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಶಿವಪ್ಪ ಗುರ್ಲಹೊಸೂರ ಎಂಬುವರ ಭತ್ತದ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಭತ್ತವನ್ನು ಕಟಾವು ಮಾಡಿ ಜಮೀನಿನಲ್ಲಿ ಬಣವೆ ಹಾಕಲಾಗಿತ್ತು. ಜಮೀನಿನಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗಳ ಸಂಪರ್ಕದಿ0ದ ಬೆಂಕಿಯ ಕಿಡಿ ಬಣವೆಗಳ ಮೇಲೆ ಬಿದ್ದಿದ್ದರಿಂದ ಬಣವೆಗಳು ಸುಟ್ಟಿವೆ ಎನ್ನಲಾಗಿದೆ.

ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರಾದರೂ ಅರ್ಧದಷ್ಟು ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕೆಲಸ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net