ಬೆಳ್ಳೂರಿನಲ್ಲಿ ನೆಟ್ಟಣಿಗೆ ರೈಸ್ ಬಿಡುಗಡೆ

New Project (3)
Published on

ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ. ಕೃಷಿ ಭವನದ ನೇತೃತ್ವದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಯಲಾದ ಅಕ್ಕಿಯನ್ನು ನೇರವಾಗಿ ಗ್ರಾಹಕರಿಗೆ ವಿತರಿಸಲು ‘ನೆಟ್ಟಣಿಗೆ ರೈಸ್’ ಬಿಡುಗಡೆಗೊಳಿಸಲಾಯಿತು.

ಪಂಚಾಯಿತಿ ಅಧ್ಯಕ್ಷ ಶ್ರೀಧರ ಎಂ.ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ, ಭತ್ತದ ತಳಿ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಅಕ್ಕಿಯ ಬ್ರಾೃಂಡ್ ಬಿಡುಗಡೆಗೊಳಿಸಿದರು. ವೆಂಕಪ್ಪ ಮಣಿ ಭಟ್ ಕಿನ್ನಿಂಗಾರು, ಜಯ ಬೆಳೇರಿ ಅಕ್ಕಿಯನ್ನು ವಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಕಾರಡ್ಕ ಬ್ಲಾಕ್ ಸಹಾಯಕ ಕೃಷಿ ನಿರ್ದೇಶಕಿ ಶೀನಾ ಕೆ.ವಿ.ಯೋಜನೆಯ ಬಗ್ಗೆ ವಿವರಿಸಿದರು. ರೈತರಲ್ಲಿ ಕೃಷಿ ತಂತ್ರಜ್ಞಾನ ನಿರ್ವಹಣಾ ಸಾಮರ್ಥ್ಯ ಬಲಪಡಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರಡ್ಕ ಕೃಷಿ ಭವನದ ಕೃಷಿ ಅಧಿಕಾರಿ ಪಿ.ವಿ.ವಿನೀತ್ ತರಬೇತಿ ನೀಡಿದರು. ಮೌಲ್ಯಾಧಾರಿತ ಉತ್ಪನ್ನಗಳ ಮಾರುಕಟ್ಟೆ ಹಾಗೂ ಕೃಷಿಕರಿಗೆ ಲಾಭ ಒದಗಿಸುವ ನಿಟ್ಟಿನಲ್ಲಿ ಕೃಷಿಕರ ಒಕ್ಕೂಟ ರಚಿಸಲಾಯಿತು.

ಗ್ರಾ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಗ್ರಾ.ಪಂ. ಮಾಜಿ ಅಧ್ಯಕ್ಷ ಕಲ್ಲಗ ಚಂದ್ರಶೇಖರ್ ರಾವ್, ಕೃಷಿ ಅಧಿಕಾರಿ ಅದ್ವೆತ್ ಎಂ.ವಿ.ಶುಭ ಹಾರೈಸಿದರು. ಜನ ಪ್ರತಿನಿಧಿಗಳು, ಕೃಷಿ ಸಹಾಯಕರು, ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net