

ಎಚ್.ಡಿ.ಕೋಟೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ವತಿಯಿಂದ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಸೋಮವಾರ ಯಂತ್ರಶ್ರೀ ಭತ್ತ ಬೇಸಾಯದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ನೀರು ಬಳಕೆದಾರರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ರಾಜ್ ಅರಸು, ಆಹಾರ ಧಾನ್ಯಗಳಲ್ಲಿ ಪ್ರಮುಖ ಬೆಳೆ ಭತ್ತ, ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಕ್ಷೀಣಿಸುತ್ತಿದ್ದು, ಭತ್ತ ಬೇಸಾಯ ಮಾಡುವ ಪ್ರದೇಶ ಕಡಿಮೆ ಆಗುತ್ತಿದೆ. ಇದರಿಂದ ಯಂತ್ರಗಳ ಬಳಕೆ ಮಾಡಿ ಭತ್ತ ಬೆಳೆಯುವ ರೈತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಯಂತ್ರಶ್ರೀ ಪದ್ಧತಿ ತರಬೇತಿ ನೀಡಿ ಅನುಷ್ಠಾನ ಮಾಡುವಂತೆ ಪ್ರೇರೇಪಿಸುತ್ತಿರುವುದು ರೈತರಿಗೆ ಉಪಯುಕ್ತವಾಗಿದೆ ಎಂದರು.
ನಾಟಿಯಂತ್ರ ಬ್ಯಾಂಕ್ ನ ಕೃಷಿ ಮೇಲ್ವಿಚಾರಕ ನವೀನ್ ಕುಮಾರ್ ಮಾತನಾಡಿ, ಭತ್ತ ನಾಟಿ ಮಾಡುವ ಹಂತದಿಂದ ಇಡಿದು ಕಟಾವು ಮಾಡುವವರೆಗೆ ಯಂತ್ರಗಳನ್ನು ಸರಿಯಾದ ಕ್ರಮದಲ್ಲಿ ಬಳಕೆ ಮಾಡುವುದರಿಂದ ಸಮಯ ಮತ್ತು ಆರ್ಥಿಕ ಹೊರೆ ಕಡಿಮೆ ಮಾಡಬಹುದಾಗಿದೆ. ಯಂತ್ರಶ್ರೀ ಪದ್ಧತಿಯಲ್ಲಿ ಟ್ರೆ ಬಳಕೆ, ಕಳೆ ನಿಯಂತ್ರಣ ಕೊನೋವಿಢರ್ ಯಂತ್ರ, ನಾಟಿಯಂತ್ರ, ಭತ್ತ ಕಟಾವು ಮಾಡುವ ಯಂತ್ರ, ಉಳುಮೆ ಮಾಡಲು ಟ್ರ್ಯಾಕ್ಟರ್ ಬಳಕೆ ಮಾಡಿ ಭತ್ತ ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿ ಅಕ ಇಳವರಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಮೇಲ್ವಿಚಾರಕ ಬಿ.ಜೆ.ರಾಜು, ವಲಯ ಮೇಲ್ವಿಚಾರಕಿ ಭಾರತಿ, ಸೇವಾಪ್ರತಿನಿ ದೇವಿಕಾ, ಯಂತ್ರಶ್ರೀ ಯೋಧ ನಾಗರಾಜು, ಪ್ರಗತಿಪರ ರೈತ ಜಗದೀಶ್ ಆರಾಧ್ಯ ಇತರರು ಇದ್ದರು.