ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ಪಾಠ

Koppa nati
ಹರಂದೂರು ಗ್ರಾಪಂ ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಭತ್ತದ ಗದ್ದೆಯಲ್ಲಿ ಕೃಷಿ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾರತಿ, ಆಶಾಲತಾ, ರಿತೇಶ್ ಇತರರಿದ್ದರು.
Published on

ಕೊಪ್ಪ: ಪಟ್ಟಣದ ಹೊರವಲಯದ ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಕೃಷಿ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಣ್ಣಕೆರೆ ಕೃಷಿಕ ಕೃಷ್ಣಮೂರ್ತಿ ಗೌಡ ಅವರ ಗದ್ದೆಗೆ ಭತ್ತದ ನಾಟಿ ವೀಕ್ಷಣೆಗೆ ಮಕ್ಕಳನ್ನು ಸೋಮವಾರ ಕರೆದುಕೊಂಡಯ ಹೋಗಲಾಗಿತ್ತು. ಟ್ರಿಲ್ಲರ್‌ನಲ್ಲಿ ಗದ್ದೆ ಉಳುಮೆ, ಸಸಿ ನೆಡುವ ಕುರಿತು ಕೃಷ್ಣಮೂರ್ತಿ ಗೌಡ ಅವರು ಮಕ್ಕಳಿಗೆ ಮಾಹಿತಿ ನೀಡಿದರು. ಮಕ್ಕಳು ನಾಟಿ ಮಾಡಿ ಅನುಭವ ಪಡೆದರು. ನಂತರ ಮಕ್ಕಳಿಗೆ ಕೆಸರುಗದ್ದೆ ಓಟ ಸ್ಪರ್ಧೆ ಏರ್ಪಡಿಸಲಾಯಿತು. ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ಶಾಲೆ ಮುಖ್ಯಶಿಕ್ಷಕಿ ಎ.ಭಾರತಿ ಅವರು ಮಕ್ಕಳಿಗೆ ಯಾಂತ್ರೀಕೃತ ಕೃಷಿ ಮಾಹಿತಿ ನೀಡಿದರು. ಹರಂದೂರು ಗ್ರಾಪಂ ಸದಸ್ಯ ರಿತೇಶ್, ಶಿಕ್ಷಕಿಯರಾದ ಆಶಾಲತಾ, ಸುಮಾ, ಸ್ಥಳೀಯರಾದ ಸುಹಾನಾ, ಭಾಸ್ಕರ, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net