ಮಳೆಗೆ ನೆಲಕ್ಕೊರಗಿದ ಭತ್ತದ ಬೆಳೆ

ಮಂಗಳವಾರ ಸುರಿದ ಮಳೆಗೆ ಗೊರೇಬಾಳದಲ್ಲಿ ಭತ್ತ ನೆಲಕ್ಕೊರಗಿರುವುದು.
ಮಂಗಳವಾರ ಸುರಿದ ಮಳೆಗೆ ಗೊರೇಬಾಳದಲ್ಲಿ ಭತ್ತ ನೆಲಕ್ಕೊರಗಿರುವುದು.
Published on

ಗೊರೇಬಾಳ: ಕಳೆದ ಎರಡು ದಿನಗಳಿಂದ ಸುರಿದ ಮಳೆ, ಗಾಳಿಗೆ ಭತ್ತದ ಬೆಳೆ ನೆಲಕ್ಕೊರಗಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗಾಗಲೇ ಭತ್ತಕ್ಕೆ ದುಂಡಾಣು ರೋಗ ಹಾಗೂ ವೈರಸ್‌ನಿಂದ ಇಳುವರಿ ಕುಸಿತವಾಗುವ ಆತಂಕದ ನಡುವೆ ಮಳೆ ಸುರಿದು ಭತ್ತ ನೆಲಕಚ್ಚಿದ್ದು ಕಾಳುಗಳಿಗೆ ಹಾಲು ತುಂಬುವುದಿಲ್ಲ ಎಂಬ ಭೀತಿ ಎದುರಾಗಿದೆ. ಸರ್ಕಾರ ರೈತರ ಹಿತ ಕಾಯಬೇಕಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net