ಅಕ್ಕಿಆಲೂರ ಉತ್ಸವ ಫೆ. 18ರಿಂದ 21ರವರೆಗೆ

Annadaneshwar Swamiji
Published on

ಅಕ್ಕಿಆಲೂರ: ಪಟ್ಟಣದಲ್ಲಿ ಫೆ. 18ರಿಂದ 21ರವರೆಗೆ ಜರುಗಲಿರುವ ಅಕ್ಕಿಆಲೂರ ಉತ್ಸವದಲ್ಲಿ ಮುಂಡರಗಿ ಡಾ. ನಾಡೋಜ ಜಗದ್ಗುರು ಅನ್ನದಾನೇಶ್ವರ ಸ್ವಾಮೀಜಿ ಅವರಿಗೆ ಚನ್ನಭೂಷಣ ಪುರಸ್ಕಾರ ಜರುಗಲಿದ್ದು, ಉತ್ಸವದ ಅಧ್ಯಕ್ಷರಾಗಿ ಡಾ.ಪ್ರಕಾಶಗೌಡ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.

ಲಿಂ.ಕುಮಾ

ರೇಶ್ವರ, ಲಿಂ ಚನ್ನವೀರೇಶ್ವರ ಪುಣ್ಯ ಸ್ಮರಣೋತ್ಸವ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಅಕ್ಕಿಆಲೂರ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸ್ಥಳೀಯ ವಿರಕ್ತಮಠದಲ್ಲಿ ಶಿವಬಸವ ಸ್ವಾಮೀಜಿಗಳ ಸಾನಿಧ್ಯದಲ್ಲಿ ಏರ್ಪಡಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಉತ್ಸವದ ಅಧ್ಯಕ್ಷರಾಗಿ ಡಾ.ಪ್ರಕಾಶಗೌಡ ಪಾಟೀಲ ನೇಮಕಗೊಂಡಿದ್ದಾರೆ. ಪ್ರತಿಷ್ಠಿತ ಚನ್ನಭೂಷಣ ಗೌರವ ಪುರಸ್ಕಾರವನ್ನು ಮುಂಡರಗಿ ಅನ್ನದಾನೇಶ್ವರ ಸಂಸ್ಥಾನಮಠದ ಡಾ.ನಾಡೋಜ ಜಗದ್ಗುರು ಅನ್ನದಾನೇಶ್ವರ ಸ್ವಾಮೀಜಿಗಳಿಗೆ ನೀಡಲು ನಿರ್ಧರಿಸಲಾಯಿತು.

ಫೆ. 18ರಿಂದ ಷಟ್​ಸ್ಥಲ ಧ್ವಜಾರೋಹಣ, ಧರ್ಮಚಿಂತನ ಗೋಷ್ಠಿ, ಗುರುವಿನೆಡೆಗೆ ಹಾನಗಲ್ಲ ಪಾದಯಾತ್ರೆ, ಧರ್ಮ ಜಾಗೃತಿ ಸಮಾರಂಭ, ಉಭಯ ಪೂಜ್ಯರ ಉತ್ಸವ, ವೀರಭದ್ರೇಶ್ವರ ದೇವರ ಪುಷ್ಪ ಮತ್ತು ಮಹಾ ರಥೋತ್ಸವ, ನಾಟಕೋತ್ಸವ, ನೃತ್ಯೋತ್ಸವ ಸೇರಿ ಧಾರ್ವಿುಕ, ಸಾಂಸ್ಕೃತಿಕ ಸಮಾರಂಭಗಳ ಕುರಿತು ರ್ಚಚಿಸಲಾಯಿತು.

ಶಿವಬಸವ ಶ್ರೀ ಮಾತನಾಡಿ, ಅಕ್ಕಿಆಲೂರ ಉತ್ಸವದಲ್ಲಿ ಧಾರ್ವಿುಕ ಮತ್ತು ಸಾಂಸ್ಕೃತಿಕ ಸಮಾರಂಭಗಳ ಜತೆಗೆ ಜನಜಾಗೃತಿಗಾಗಿ ಅನೇಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉತ್ಸವವು ಅಕ್ಕಿಆಲೂರಿನ ಮನೆಮನಗಳ ಹಬ್ಬವಾಗಲಿದೆ ಎಂದು ಹೇಳಿದರು.

ಉತ್ಸವ ಸಮಿತಿ ಅಧ್ಯಕ್ಷ ಡಾ.ಪ್ರಕಾಶಗೌಡ ಪಾಟೀಲ ಮಾತನಾಡಿ, ಅಕ್ಕಿಆಲೂರ ಧಾರ್ವಿುಕ, ಸಾಂಸ್ಕೃತಿಕ ಮತ್ತು ಹಾಗೂ ರಕ್ತದಾನದ ಮೂಲಕ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಈ ಬಾರಿಯ ಅಕ್ಕಿಆಲೂರ ಉತ್ಸವದ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ರಾಜಣ್ಣ ಗೌಳಿ, ಕುಮಾರ ದೇಶಮುಖ, ರಾಜೇಂದ್ರ ಚವಟಿ, ಸದಾಶಿವ ಕಂಬಾಳಿ, ಷಣ್ಮುಖಪ್ಪ ಮುಚ್ಚಂಡಿ, ಉದಯ ವಿರುಪ್ಪಣ್ಣವರ, ನಾಗರಾಜ ಪಾವಲಿ, ಸಿದ್ದಣ್ಣ ಸಿಂಧೂರ, ಮೃತ್ಯುಂಜಯ ಮುತ್ತಿನಕಂತಿಮಠ, ಮಲ್ಲನಗೌಡ ಪಾಟೀಲ, ಸದಾನಂದ ಉಡುಪಿ, ಮಲ್ಲಿಕಾರ್ಜುನ ಕಂಬಾಳಿ, ಬಸವರಾಜ ಕೋರಿ, ಕೊಟ್ಟೂರಬಸಪ್ಪ ಬೆಲ್ಲದ, ಪ್ರಕಾಶ ದುರ್ಗದ, ಶಿವಯೋಗಿ ಪಾಟೀಲ, ಪವನ ಜಾಬೀನ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net