ರಿವಾರ್ಡ್ ಯೋಜನೆಯಿಂದ ಅಭಿವೃದ್ಧಿ ಸಾಧ್ಯ

Untitled design
ಅಳವಂಡಿ ಸಮೀಪದ ಹಟ್ಟಿ ಗ್ರಾಪಂಯಲ್ಲಿ ಕೃಷಿ ಮತ್ತು ಜಲಾನಯನ ಅಭಿವೃದ್ದಿ ಇಲಾಖೆಯಿಂದ ಆಯೋಜಿಸಿದ್ದ ರಿವಾರ್ಡ್ ಯೋಜನೆ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಬಿ.ಎಮ್.ಗೊಬ್ಬರಗುಂಪಿ ಮಾತನಾಡಿದರು. ಎಎಒ ಮಾರುತಿ ಪ್ರಮುಖರಾದ ಭರಮಪ್ಪ, ತೋಟಪ್ಪ, ಹೊನ್ನಪ್ಪಗೌಡ, ಪ್ರಶಾಂತ, ವಿಷ್ಣು, ಜಂಗ್ಲಿಸಾಬ ಇದ್ದರು.
Published on

ಅಳವಂಡಿ: ಕೃಷಿಯಲ್ಲಿ ಸುಸ್ಥಿರತೆಗಾಗಿ ಅಭಿವೃದ್ದಿ ಮೂಲಕ ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಿ ಜಲಾನಯನ ಪ್ರದೇಶ ಪುನಶ್ಚೇತನಗೊಳಿಸುವುದೇ ರಿವಾರ್ಡ್ ಯೋಜನೆ ಗುರಿಯಾಗಿದೆ ಎಂದು ಕೃಷಿ ಅಧಿಕಾರಿ ಬಿ.ಎಮ್.ಗೊಬ್ಬರಗುಂಪಿ ತಿಳಿಸಿದರು.


ಸಮೀಪದ ಹಟ್ಟಿ ಗ್ರಾಪಂಯಲ್ಲಿ ಕೃಷಿ ಮತ್ತು ಜಲಾನಯನ ಅಭಿವೃದ್ದಿ ಇಲಾಖೆ, ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ದಿ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ರಿವಾರ್ಡ್ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.


ರಿವಾರ್ಡ್ ಜಲಾನಯನ ಅಭಿವೃದ್ದಿ ಯೋಜನೆಯಡಿ ಈಗಾಗಲೆ ಸ್ವಸಹಾಯ ಸಂಘಗಳಿಗೆ ತರಬೇತಿ, ಬೀದಿ ನಾಟಕ, ಗ್ರಾಮ ಸಭೆ, ಮಣ್ಣು ಸಂರಕ್ಷಣೆ ಕುರಿತು ಜಾಗೃತಿ, ರೈತರ ಕ್ಷೇತ್ರ ಗುಂಪು ರಚನೆ, ಗ್ರಾಮಗಳಲ್ಲಿ ಸೋಲಾರ್ ದೀಪ, ಬೆಂಚ್‌ಗಳ ಅಳವಡಿಕೆ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಬರ ಪರಿಹಾರ ವಿತರಣೆ, ವಿಮೆ ನೋಂದಣಿ, ಬ್ಯಾಂಕ್ ಸಾಲ ಸೌಲಭ್ಯಕ್ಕೆ ರೈತರು ಪ್ರೋಟ್ಸ್ ತಂತ್ರಾಂಶದಲ್ಲಿ ಎಫ್‌ಐಡಿ ನೋಂದಣೆ ಮಾಡಿಸಬೇಕು ಎಂದರು.


ಸಹಾಯಕ ಕೃಷಿ ಅಧಿಕಾರಿ ಮಾರುತಿ ಬಗನಾಳ ಮಾತನಾಡಿ, ರಿವಾರ್ಡ ಯೋಜನೆ ರೈತರ ಆರ್ಥಿಕ ಸ್ಥಿತಿಯನ್ನು ಬಲಗೊಳಿಸಲಿದೆ. ಹಿಂಗಾರು ಹಂಗಾಮು ಮುಗಿದ ನಂತರ ರೈತರ ಜಮೀನುಗಳಲ್ಲಿ ಕೃಷಿ ಹೊಂಡ, ಬದು ನಿರ್ಮಾಣ ಚಟುವಟಿಕೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.


ಗ್ರಾಪಂ ಅಧ್ಯಕ್ಷೆ ಪರವಿನಬಾನು, ಪಿಡಿಒ ರತ್ನವ್ವ ಕಂಬಳಿ, ಡಿಪಿಸಿ ಪ್ರಶಾಂತ, ಜಲಾನಯನ ಇಲಾಖೆಯ ಸಿಬ್ಬಂದಿಗಳಾದ ಬಸನಗೌಡ, ವೆಂಕಟೇಶ, ಮಂಜುನಾಥ, ಗವಿಸಿದ್ದಪ್ಪ, ಸುರೇಶ, ಸಂತೋಷ, ಪ್ರಮುಖರಾದ ಭರಮಪ್ಪ ನಗರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ಮೋದಿನಸಾಬ, ವಿಷ್ಣು ಹಾಳಕೇರಿ, ಜಂಗ್ಲಿಸಾಬ, ಗುಡದಪ್ಪ, ಶಿವಮ್ಮ, ನಿಂಗನಗೌಡ, ಪ್ರಶಾಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net