

ಹೆಬ್ರಿ: ವಿವಿಧ ಸಂ ಸಂಸ್ಥೆಗಳು ಸೇರಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು, ಗಿಡ ನೆಟ್ಟು, ಪೋಷಿಸಿದವರಿಗೆ ಬಹುವಾನ ಕೊಡುತ್ತಿರುವುದು ವಿಶೇಷ ಕಾರ್ಯಕ್ರಮ. ಇದು ವಿದ್ಯಾರ್ಥಿಗಳಿಗೆ ಗಿಡ ನೆಡುವಂತೆ ಪ್ರೋತ್ಸಾಹಿಸುತ್ತದೆ. ಹುಟ್ಟು ಹಬ್ಬದ ದಿನ ಮುಂದಿನ ದಿನಗಳಲ್ಲಿ ಕಾರ್ಯಕ್ರಮದಿಂದ ಪ್ರೇರಣೆಗೊಂಡು ಗಿಡ ನೆಡುತ್ತಾರೆ ಎಂದು ಕುಚ್ಚೂರು 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಂಜುನಾಥ ಶೆಟ್ಟಿ ಹೇಳಿದರು.
ಶಾಂತಿನಿಕೇತನ ಯುವವೃಂದ ಕುಡಿಬೈಲು ಕುಚ್ಚೂರು ಮತ್ತು ವಿಜಯವಾಣಿ ನೇತೃತ್ವದಲ್ಲಿ ಶ್ರೀ ರಾವೇಂದ್ರ ಚಾರಿಟೆಬಲ್ ಟ್ರಸ್ಟ್ ಹೆಬ್ರಿ ಸಹಕಾರದೊಂದಿಗೆ ಜ್ಞಾನವನ್ನು ಬಿತ್ತಿರಿ, ಮರಗಳನ್ನು ಬೆಳೆಸಿರಿ ಎಂಬ ಧ್ಯೇಯ ವಾಕ್ಯದೊಂದಿಗೆ ವನಮಹೋತ್ಸವ ಕಾರ್ಯಕ್ರಮದ ಸಸಿ, ಬಹುವಾನ ವಿತರಿಸಿ ವಾತನಾಡಿದರು.
ತಾಲೂಕಿನ 13 ಶಾಲೆಗಳಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಶಾಂತಿನಿಕೇತನದ ನರೇಂದ್ರ ಎಸ್.ಮರಸಣಿಗೆ, ದೀಕ್ಷಿತ್ ನಾಯಕ್, ಪ್ರಸನ್ನ, ವಿವಿಧ ಶಾಲೆ ಮುಖ್ಯ ಶಿಕ್ಷಕರು ಇದ್ದರು.