

ತೇರದಾಳ: ಸಮಸಮಾಜದ ಹರಿಕಾರರೆನಿಸಿದ, ಕ್ರಾಂತಿಯೋಗಿ ಬಸವೇಶ್ವರರ ತತ್ವಾದರ್ಶಗಳು ಯುವ ಪೀಳಿಗೆಗೆ ಸದಾ ಮಾರ್ಗದರ್ಶನ ನೀಡುತ್ತವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಅಭಿಪ್ರಾಯಪಟ್ಟರು.
ಪಟ್ಟಣದ ಬಸ್ ನಿಲ್ದಾಣ ಬಳಿಯ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಅಂಗವಾಗಿ ಬುಧವಾರ ಬಸವೇಶ್ವರರ ಭವ್ಯ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಅನುಭವ ಮಂಟಪ-ಬಸವಾದಿ ಶಿವಶರಣರ ವೈಭವದ ರಥಯಾತ್ರೆಯ ಬಳಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಬಸವ ತತ್ವ ಅನುಯಾಯಿಗಳು ಹೆಚ್ಚುತ್ತಲಿದ್ದಾರೆ. ಜೀವನದ ನೆಮ್ಮದಿ ಹಾಗೂ ಶಾಂತಿಗಾಗಿ ಬಸವ ತತ್ವವನ್ನು ಎಲ್ಲರೂ ಅನುಸರಿಸುವುದು ಅಗತ್ಯವಾಗಿದೆ. ನಾವೆಲ್ಲರೂ ಬಸವೇಶ್ವರರ ಬದುಕು-ಬರಹ ಅಭ್ಯಸಿಸಿ, ಅವರ ಅನುಯಾಯಿಗಳಾಗುವ ಮೂಲಕ ಬದುಕಲ್ಲಿ ನೆಮ್ಮದಿ, ಸಮಾಧಾನ ಪಡೆಯೋಣ ಎಂದರು.
ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ಮುಖಂಡರಾದ ರಾಮಣ್ಣ ಹಿಡಕಲ್, ಮಹಾವೀರ ಕೊಕಟನೂರ, ಗೌತಮ ರೋಡಕರ, ಅಪ್ಪು ಮಂಗಸೂಳಿ, ಭುಜಬಲಿ ಕೆಂಗಾಲಿ, ಶಂಕರ ಕುಂಬಾರ, ಮುರುಗೆಶ ಬಾಳಿಕಾಯಿ, ರಮೇಶ ಧರೆಣ್ಣವರ, ಮಹೇಶ ಹಂಜಿ, ಸದಾಶಿವ ಹೊಸಮನಿ, ಕೇದಾರಿ ಪಾಟೀಲ, ಸಚಿನ ಕೊಡತೆ, ಕುಮಾರ ಸರಿಕರ ಮತ್ತಿತರರಿದ್ದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಯ, ಕುಂಬಾರ ಗಲ್ಲಿ, ಶ್ರೀ ಸಿದ್ಧೇಶ್ವರ ಶಾಲೆ ಸೇರಿ ಬುಧವಾರ ಅನೇಕ ಕಡೆಗಳಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮ ಜರುಗಿತು.