ಕ್ರಾಂತಿಕಾರಿ ಹೋರಾಟಗಾರರ ಆದರ್ಶ ಅನುಸರಿಸಿ

Hrp Manaiv
ಹರಪನಹಳ್ಳಿಯಲ್ಲಿ ಗುರುವಾರ ಎಐವೈಎಫ್ ಸಂಘಟನೆಯಿಂದ ಹುತಾತ್ಮರ ದಿನ ಆಚರಿಸಲಾಯಿತು. ಪ್ರಮುಖರಾದ ಕೊಟ್ರೇಶ್, ವಿಶ್ವನಾಥ, ಅಭಿಷೇಕ್, ಮುಜೀಬ್, ವಿಜಯಕುಮಾರ್, ಅರುಣ್ ಕುಮಾರ್ ಇತರರಿದ್ದರು.
Published on

ಹರಪನಹಳ್ಳಿ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳು ಪ್ರಮುಖ ಪಾತ್ರವಹಿಸಿದ್ದು, ದೇಶದ ಐಕ್ಯತೆಯ ಪ್ರತೀಕವಾಗಿ ಹೋರಾಡಿದರು ಎಂದು ಎಐವೈಎಫ್ ರಾಜ್ಯ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಹೇಳಿದರು.

ಪಟ್ಟಣದ ಐಬಿ ವೃತ್ತದಲ್ಲಿ ಗುರುವಾರ ಎಐವೈಎಫ್ ಸಂಘಟನೆ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು. ಬ್ರಿಟಿಷರಿಂದ ದೇಶವನ್ನು ಮುಕ್ತಗೊಳಿಸಲು ರಾಮ್ ಪ್ರಸಾದ್ ಬಿಸ್ಮಿಲ್ಲಾ, ಅಶ್ಪಾಖ್ ಉಲ್ಲಾ ಖಾನ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಖ್‌ದೇವ್, ರಾಜ್ ಗುರು ಸೇರಿ ಹಲವು ಯುವ ಕ್ರಾಂತಿಕಾರಿಗಳು ನವ ಜವಾನ್ ಭಾರತ್ ಸಭಾ ಎಂಬ ಸಂಘಟನೆ ಕಟ್ಟಿಕೊಂಡು ಹೋರಾಟ ನಡೆಸಿದರು. ಇದೇ ಸಂಘಟನೆ ಮುಂದೆ ಹಿಂದೂಸ್ತಾನ್ ಸೋಷಿಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್ ಆಯಿತು.

ಈ ಸಂಘಟನೆ ಮೂಲಕ ಬ್ರಿಟಿಷರ ಪಾಲಿಗೆ ಅನೇಕ ಕ್ರಾಂತಿಕಾರಿಗಳು ಸಿಂಹಸ್ವಪ್ನವಾಗಿ ಕಾಡಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರನ್ನು ಸ್ಮರಿಸಬೇಕು. ಕ್ರಾಂತಿಕಾರಿಗಳ ಆದರ್ಶಗಳನ್ನು ಯುವ ಜನತೆ ಅನುಸರಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net