ಕ್ರಾಂತಿ ಮಹಿಳಾ ಮಂಡಳದ ಸೇವೆ ಶ್ಲಾಘನೀಯ

1210
Published on

ಬೆಳಗಾವಿ: ಹಿಂದವಾಡಿ ಕ್ರಾಂತಿ ಮಹಿಳಾ ಮಂಡಳ ಸದಸ್ಯರು ಜನಪರ ಕಾರ್ಯಗಳ ಮೂಲಕ ಸೇವೆ ಮಾಡುತ್ತಿದ್ದು, ಇವರ ಕಾರ್ಯ ಶ್ಲಾಘನೀಯ ಎಂದು ಸಾಹಿತಿ ಎ.ಎ. ಸನದಿ ಪ್ರಶಂಸಿಸಿದರು.

ಹಿಂದವಾಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ಬಡ ಹಾಗೂ ಅನಾಥ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ರಾಂತಿ ಮಹಿಳಾ ಮಂಡಳದ ಅಧ್ಯಕ್ಷೆ ಶೋಭಾ ಕಾಡಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ 10ನೇ ತರಗತಿ ವಿದ್ಯಾರ್ಥಿ ಓಂ ಜಾಧವ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‌ನ ವಿದ್ಯಾರ್ಥಿನಿ ಕೃತಿಕಾ ದೇವರಮನಿ ಅವರಿಗೆ ವಾರ್ಷಿಕ ಸಂಪೂರ್ಣ ಶುಲ್ಕದ ಚೆಕ್ ವಿತರಿಸಲಾಯಿತು.

ಸಂಸ್ಥಾಪಕ ಅಧ್ಯಕ್ಷೆ ಮಂಗಲಾ ಮಠದ, ಕಾರ್ಯದರ್ಶಿ ದರ್ಶನಾ ನಿಲಜಗಿ, ರತ್ನಶ್ರೀ ಗುಡೇರ, ಗೀತಾ ಎಮ್ಮಿ, ಆಶಾ ನಿಲಜಗಿ, ದೀಪ್ತಿ ಕಾಗವಾಡ, ಭಾರತಿ ಕೆರೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net