ಧರ್ಮಸ್ಥಳ ಸಂಸ್ಥೆಯಿಂದ 872 ಕೆರೆ ಪುನರುಜ್ಜೀವನ

mla....2
Published on

ಚಿತ್ರದುರ್ಗ: ಸರ್ಕಾರ ಮಾಡುವಂಥ ಕೆಲಸಗಳನ್ನು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿರುವುದಾಗಿ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಹೇಳಿದರು.

ತಾಲೂಕಿನ ಕೊಂಡಗವಳ್ಳಿಯಲ್ಲಿ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ನಮ್ಮೂರು-ನಮ್ಮ ಕೆರೆ’ ಕಾರ್ಯಕ್ರಮದಡಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, ಈ ಸಂಸ್ಥೆಯಿಂದ ರಾಜ್ಯದಲ್ಲಿ 872 ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಕೆರೆ ಬಳಕೆ ಸಮಿತಿ ಕೆರೆಗಳನ್ನು ಸಂರಕ್ಷಿಸಬೇಕು. ಘನತ್ಯಾಜ್ಯ ವಿಲೇವಾರಿ ಆಗದಂತೆ ನೋಡಿಕೊಳ್ಳಬೇಕು ಎಂದರು.

ಕೊಂಡಗವಳ್ಳಿ ಮುಖ್ಯ ರಸ್ತೆಗೆ ಡಕ್‌ನೊಂದಿಗೆ ಸಿಸಿ ರಸ್ತೆ ನಿರ್ಮಿಸಲು 40 ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಕೊಂಡಗವಳ್ಳಿ ಗ್ರಾಪಂ ವ್ಯಾಪ್ತಿಗೆ 130 ವಸತಿ ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದರು.

ತಾಪಂ ಇಒ ರವಿಕುಮಾರ್, ಕಂದಾಯ ನಿರೀಕ್ಷಕ ಮೋಹನ್‌ಕುಮಾರ್, ಪಿಡಿಒ ವನಜಾಕ್ಷಿ, ಕೆಡಿಪಿ ಸದಸ್ಯ ನಾಗರಾಜ್,ಹಿರೇಗುಂಟನೂರು ಗ್ರಾಪಂ ಅಧ್ಯಕ್ಷ ಮೋಹನ್‌ಮೂರ್ತಿ, ಧರ್ಮಸ್ಥಳ ಯೋಜನಾಧಿಕಾರಿ ರವಿಚಂದ್ರ, ಮೌನೇಶ್, ಹಾಲೇಶ್, ಸಾಕಮ್ಮ, ಚಂದ್ರಶೇಖರ್, ನಿಂಗಪ್ಪ, ಶರಣಪ್ಪ, ಮಹಾಲಕ್ಷ್ಮೀ, ನಿಂಗರಾಜ್ ನಾಯಕ್, ಮಲ್ಲೇಶ್, ನಾಗರಾಜ್, ಮಹಾಲಿಂಗಮ್ಮ, ನೇತ್ರಾವತಿ, ರೇಖಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net