ನೂಜಿಬಾಳ್ತಿಲದಲ್ಲಿ ಪುನಃಶ್ಚೇತನ ಕಾರ್ಯಾಗಾರ

New Project (20)
Published on

ಕಡಬ: ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ, ನೂಜಿಬಾಳ್ತಿಲ ಉ.ಹಿ.ಪ್ರಾ ಶಾಲೆ, ಉಪ್ಪಿನಂಗಡಿ ಭಾರತ್ ಸ್ಕೌಟ್ಸ್-ಗೈಡ್ಸ್ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಾಗಾರ ನೂಜಿಬಾಳ್ತಿಲ ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.

ನೂಜಿಬಾಳ್ತಿಲ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೂಜಿಬಾಳ್ತಿಲ ಶಾಲಾ ಸ್ಕೌಟ್ಸ್-ಗೈಡ್ಸ್ ಟಕವನ್ನು ನಿವೃತ್ತ ನೌಕಾದಳ ಸೇನಾಧಿಕಾರಿ ತಾರಾನಾಥ ಉದ್ಘಾಟಿಸಿದರು. ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಜಾಲು, ಉಪ್ಪಿನಂಗಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸೇಸಪ್ಪ ರೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಅಧ್ಯಕ್ಷ ಸುಧೀಶ್ ಮಂಜೋಳಿ, ನೂಜಿಬಾಳ್ತಿಲ ಮತ್ತು ಕಡಬ ಕ್ಲಸ್ಟರ್ ಸಿ.ಆರ್.ಪಿ. ಗಣೇಶ್ ನಡುವಾಲು, ನೂಜಿಬಾಳ್ತಿಲ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುವ, ಶಿಕ್ಷಕ ವೆಂಕಟರಮಣ ಉಪಸ್ಥಿತರಿದ್ದರು.

ಗೈಡ್ಸ್ ಕ್ಯಾಪ್ಟನ್‌ಗಳಾದ ಪ್ರೇಮಾ ಮತ್ತು ಶಾಂತಿ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ಸಂಸ್ಥೆಯ 25 ವಿದ್ಯಾರ್ಥಿಗಳಿಗೆ ಗಣ್ಯರಿಂದ ಸ್ಕಾರ್ಪ್ ವಿತರಣೆ ವಾಡಲಾಯಿತು. ಶಾಲಾ ಮುಖ್ಯಗುರು ಸುಂದರಿ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net