ಮತಪಟ್ಟಿ ಪಟ್ಟಿ ಪರಿಷ್ಕರಣೆ

CTD 26 ACEO-05
Published on

ಚಿತ್ರದುರ್ಗ: ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯಚುನಾವಣೆ ಆಯೋಗದ ಹೆಚ್ಚುವರಿ ಮುಖ್ಯಚುನಾವಣಾಧಿಕಾರಿ ರಾಜೇಂದ್ರ ಚೋ ಳನ್ ಅವರು ನಗರದಲ್ಲಿ ಸೋಮವಾರ ಸೂಪರ್ ಚೆಕ್ಕಿಂಗ್ ನಡೆಸಿದರು. ಬಳಿಕ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಾವಣಗೆರೆ,ಚಿತ್ರದು ರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ಮತಪಟ್ಟಿ ಪರಿಷ್ಕರಣೆ ಪ್ರಗತಿಯನ್ನು ಪರಿಶೀಲಿಸಿದರು.

ನಗರದ ಕೆಲವು ಮತಗಟ್ಟೆಗಳಿಗೆ,ಗೋಪಾಲಪುರ ರೋಡ್,ಮಾರುತಿ ನಗರದ ಕೆಲವು ಮನೆಗಳಿಗೆ ಭೇಟಿ ನೀಡಿ ಮತಪಟ್ಟಿಗೆ ಹೊಸ ದಾಗಿ ಹೆಸರು ಸೇರ್ಪಡೆ, ಡಿಲಿಷನ್, ವಿಳಾಸ ಬದಲಾವಣೆ ಇತ್ಯಾದಿ ನಡೆದಿರುವ ಪರಿಷ್ಕರಣೆ ಕಾರ‌್ಯವನ್ನು ಪರಿಶೀಲಿಸಿದರು. ಉಪವಿಭಾಗಾ ಧಿಕಾರಿ ಆರ್.ಚಂದ್ರಯ್ಯ,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್‌ರೆಡ್ಡಿ,ನಗರಸಭೆ ಕಂದಾಯಾಧಿಕಾರಿ ಚಂದ್ರಶೇಖರ್, ಸಹಾಯಕ ಇಂಜಿನಿಯರ್ ಕಿರಣ್‌ಕುಮಾರ್ ಇತರೆ ಅಧಿಕಾರಿಗಳಿದ್ದರು.

ರಾಜೇಂದ್ರಚೋಳನ್ ಅವರು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಈ ಸಂಬಂಧ ನಗರಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net