

ಹುಬ್ಬಳ್ಳಿ: ಧಾರವಾಡ-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಧಾರವಾಡ ನಿಲ್ದಾಣಗಳ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಅಕ್ಟೋಬರ್ 7ರಿಂದ ಈ ಬದಲಾವಣೆ ಜಾರಿಗೆ ಬರಲಿದೆ. ಕೆಎಸ್ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20661) ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬೆಳಗ್ಗೆ 11.30ರ ಬದಲು 11 ಗಂಟೆಗೆ ಆಗಮಿಸಲಿದೆ. 11.35ರ ಬದಲು 11.05 ಗಂಟೆಗೆ ನಿರ್ಗಮಿಸಲಿದೆ.
ಧಾರವಾಡ-ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20662) ಯಶವಂತಪುರ ರೈಲು ನಿಲ್ದಾಣಕ್ಕೆ ಸಂಜೆ 7.13ರ ಬದಲು 6.58 ಗಂಟೆಗೆ ಆಗಮಿಸಲಿದೆ. 7.15 ಬದಲು 7 ಗಂಟೆಗೆ ನಿರ್ಗಮಿಸಲಿದೆ. ಉಳಿದ ಎಲ್ಲ ನಿಲ್ದಾಣಗಳಲ್ಲಿ ಆಗಮನ-ನಿರ್ಗಮನ ಸಮಯದಲ್ಲಿ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ತಿಳಿಸಿದೆ.