

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನೂತನ ಮತದಾರ ಪಟ್ಟಿಯ ಪರಿಷ್ಕರಣೆ ಬಳಿಕ 11,688 ಮತದಾರ ಸಂಖೆಯು ಏರಿಕೆ ಕಂಡಿದೆ.
ಕಳೆದ ಜ.5 ರಂದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತವು ಪ್ರಕಟಿಸಿದೆ. ಅದರಂತೆ 5,22,817 ಪುರುಷರು, 5,38,767 ಮಹಿಳೆಯರು, 90 ಮಂದಿ ಇತರ ಮತದಾರರು ಸೇರಿದಂತೆ ಜಿಲ್ಲಾದ್ಯಂತ 10,61584 ಮಂದಿ ಮತದಾರರು ಇದ್ದಾರೆ. ಇದರಲ್ಲಿ 85 ವರ್ಷ ಮೇಲ್ಪಟ್ಟವರು 12,697, ಯುವ ಮತದಾರರು 14,431, ಇನ್ನು 17,132 ಅಂಗವಿಕಲರು ಮತದಾರರ ಇದ್ದಾರೆ.
*11,688 ಮತದಾರ ಹೆಚ್ಚಳ
ಕಳೆದ 2024 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ್ದ ಸಂದರ್ಭದಲ್ಲಿ 10,49,896 ಮತದಾರರಿದ್ದು ಇದ್ದು ಇದೀಗ 2025 ನೇ ಸಾಲಿನ ಮತದಾರ ಪರಿಷ್ಕರಣೆಯ ಬಳಿಕ (ಜ.5 ರಂದು)ನಜಿಲ್ಲೆಯಲ್ಲಿ 4,659 ಪುರುಷರು ಹಾಗೂ 7,029 ಮಹಿಳೆಯರು ಸೇರಿದಂತೆ 11,688 ಮತದಾರರು ಹೆಚ್ಚಾಗಿದ್ದಾರೆ. ಇನ್ನು ಮತದಾರರ ಹೆಸರು ಸೇರ್ಪಡೆ, ರದ್ದು ಮತ್ತು ವರ್ಗಾವಣೆಯ ಬಗೆಗಿನ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದೆ. ಆನ್ ಲೈನ್ ಇಲ್ಲವೇ ಆನ್ಲೆನ್ನಲ್ಲಿ ಪರಿಷ್ಕರಿಸಲಾಗುತ್ತಿದೆ. ಇದಕ್ಕೆ ಸಂಬAಧಿಸಿದAತೆ ಸಹಾಯವಾಣಿ ಮೊಬೈಲ್ ಆ್ಯಪ್ ನಲ್ಲಿ ಚುನಾವಣೆಗೆ ಹಾಗೂ ಮತದಾರರ ಪಟ್ಟಿ ಇತರ ಮಾಹಿತಿಗಳನ್ನು ಸಹ ಅಳವಡಿಸಲಾಗಿದೆ.